ಕರ್ನಾಟಕ

karnataka

ETV Bharat / state

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುತ್ತದೆ: ಸಿದ್ದರಾಮಯ್ಯ ಭವಿಷ್ಯ - ಬಿಜೆಪಿ-ಜೆಡಿಎಸ್ ಒಳ ಒಪ್ಪಂದ

ಕೋವಿಡ್​ ಹೊಸ ತಳಿ ಬೇರೆ ಕಡೆ ಕಾಣಿಸಿಕೊಂಡಿದ್ದು, ಕರ್ನಾಟಕಕ್ಕೆ ಬರದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

siddaramaiah on karnataka MLC election
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Nov 29, 2021, 4:43 PM IST

ಮೈಸೂರು: ವಿಧಾನ ಪರಿಷತ್ ಚುನಾವಣೆ ನಡೆಯುವ 25 ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ 20 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕಲಾಗಿದೆ. ಅದರಲ್ಲಿ 15 ಸೀಟ್ ಗೆಲ್ಲುತ್ತೇವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದವರು ಬಿಜೆಪಿಗೆ ಸಪೋರ್ಟ್​ ಮಾಡುವುದರಿಂದ ನಮಗೇನೂ ಪರಿಣಾಮ ಬೀರಲ್ಲ. ನಮ್ಮ ವೋಟು ನಮ್ಮ ಬಳಿ ಇವೆ, ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಚುನಾವಣೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು..

ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಒಳ ಒಪ್ಪಂದ

ಬಿಜೆಪಿ-ಜೆಡಿಎಸ್ ಮೊದಲಿನಿಂದಲೂ ಒಳ ಒಪ್ಪಂದ ಮಾಡಿಕೊಂಡಿದ್ದು, ಈಗಲೂ ಮಾಡಿಕೊಂಡಿದ್ದಾರೆ. ಎಲ್ಲಾ ಚುನಾವಣೆಗಳಲ್ಲೂ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಸಂಸತ್​​ನ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕೃಷಿ ಕಾಯ್ದೆ ಹಿಂಪಡೆದ ಕುರಿತು ಪ್ರತಿಕ್ರಿಯಿಸಿ, ನಿನ್ನೆ ಎಲ್ಲಾ ಪಕ್ಷದ ಸಭೆ ಕರೆದಿದ್ದರು. ಪ್ರಧಾನಿಯವರು ಸಭೆಗೆ ಹಾಜರಾಗಬೇಕಿತ್ತು. ಹೋಗದೇ ಇರುವುದು ಪ್ರಜಾಪ್ರಭುತ್ವಕ್ಕೆ ಮಾಡುವಂತಹ ಅಗೌರವ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮನ್ ಕಿ ಭಾತ್​ನಲ್ಲಿ ಅಧಿಕಾರ ಮುಖ್ಯವಲ್ಲ.‌ ಜನಸೇವೆ ಮುಖ್ಯ ಎಂಬ ಪ್ರಧಾನಿ ಮಾತಿಗೆ ಪ್ರತಿಕ್ರಿಯಿಸಿ, ಅದೇನು ಹೊಸತಲ್ಲ. ಪ್ರಧಾನಮಂತ್ರಿ ಆದವರು ಜನಸೇವೆಯೇ ಮಾಡುವುದು ಎಂದು ತಿಳಿಸಿದರು.

ಸೂಕ್ತ ‌ಮುನ್ನೆಚ್ಚರಿಕೆ ಕೈಗೊಳ್ಳಬೇಕು

ಕೊರೊನಾ ಮೂರನೇ ಅಲೆ ಕುರಿತು ಪ್ರತಿಕ್ರಿಯಿಸಿ, ಕೋವಿಡ್​ ಹೊಸ ತಳಿ ಬೇರೆ ಕಡೆ ಕಾಣಿಸಿಕೊಂಡಿದ್ದು, ಕರ್ನಾಟಕಕ್ಕೆ ಬರದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು.‌ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಗಡಿ ಭಾಗಗಳಲ್ಲಿ ಬಿಗಿ ಮಾಡಬೇಕು. ಮೊದಲು ರಾಜ್ಯಕ್ಕೆ ಬರದಂತೆ ನೋಡಿಕೊಳ್ಳಬೇಕು. ಅದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಎರಡನೇ ಅಲೆಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿರಲಿಲ್ಲ, ಆಕ್ಸಿಜನ್ ಬೆಡ್ ಇರಲಿಲ್ಲ, ಔಷಧಿಯೂ ಇರಲಿಲ್ಲ.‌ ಹಾಗಾಗಿ, ಬಹಳಷ್ಟು ಮಂದಿ ಮೃತಪಟ್ಟರು. ಈ ಬಾರಿ ಹಾಗಾಗಬಾರದು.‌ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಬಂದ ಮೇಲೆ ಚಿಕಿತ್ಸೆ ನೀಡುವುದಲ್ಲ, ಬರದೇ ಇರುವ ರೀತಿ ತಡೆಯಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ರು.

ಓದಿ:ತುಮಕೂರು: ಒಂದು ದಶಕದ ಹಿಂದೆ ಬಂದ್ ಮಾಡಿದ್ದ ಸರ್ಕಾರಿ ಶಾಲೆ ರೀ ಓಪನ್​

ABOUT THE AUTHOR

...view details