ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಬೇಜವಾಬ್ದಾರಿ ಮನುಷ್ಯ : ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ - ಯಡಿಯೂರಪ್ಪ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ

ಸಿದ್ದರಾಮಯ್ಯ ಹತಾಶರಾಗಿ ಬಾಲಿಶ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರು ಸಿಎಂ ಆಗಿದ್ದುಕೊಂಡು ಚುನಾವಣೆಯಲ್ಲಿ, ಅವರ ಜೊತೆಯಲ್ಲಿದ್ದ ಮಂತ್ರಿಗಳೆಲ್ಲ ಉದುರಿ ಹೋದರು. ಬಾದಾಮಿಯಲ್ಲಿ ಸೋತಿದ್ದರೇ, ನಿಮ್ಮ ಸ್ಥಿತಿ ಏನಾಗುತ್ತಿತ್ತು..

mp-srinivasa-prasad
ಸಂಸದ ಶ್ರೀನಿವಾಸ್ ಪ್ರಸಾದ್

By

Published : Jul 26, 2021, 4:45 PM IST

ಮೈಸೂರು :ಸಿದ್ದರಾಮಯ್ಯ ಒಬ್ಬ ಬೇಜವಾಬ್ದಾರಿ ಮನುಷ್ಯ. ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಇನ್ನೂ ಕಲಿತಿಲ್ಲ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿ..

ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ ಹಾಗೂ ಮುಂದೆ ಬರುವವರು ಭ್ರಷ್ಟರಾಗಿರುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರೊಬ್ಬರೇ ಪ್ರಾಮಾಣಿಕರೆ? ಹಾಗಾದರೆ, ಬೇರೆ ಯಾರನ್ನೂ ಸಿಎಂ ಮಾಡಬಾರದಾ? ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಹತಾಶರಾಗಿ ಬಾಲಿಶ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರು ಸಿಎಂ ಆಗಿದ್ದುಕೊಂಡು ಚುನಾವಣೆಯಲ್ಲಿ, ಅವರ ಜೊತೆಯಲ್ಲಿದ್ದ ಮಂತ್ರಿಗಳೆಲ್ಲ ಉದುರಿ ಹೋದರು. ಬಾದಾಮಿಯಲ್ಲಿ ಸೋತಿದ್ದರೇ, ನಿಮ್ಮ ಸ್ಥಿತಿ ಏನಾಗುತ್ತಿತ್ತು ಎಂದು ವ್ಯಂಗ್ಯವಾಡಿದರು.

ನಾನೊಬ್ಬ ಹಿರಿಯ ನಾಯಕನಾಗಿದ್ದೆ. ಮಲ್ಲಿಕಾರ್ಜುನ ಖರ್ಗೆ ಪುತ್ರನಿಗಾಗಿ ನನ್ನನ್ನು ವ್ಯವಸ್ಥಿತವಾಗಿ ತುಳಿದರು. ಇದಕ್ಕೆ ಪ್ರತಿಯಾಗಿ ತಕ್ಕಪಾಠ ಕಲಿಸಿದ್ದೇನೆ ಎಂದು ವಾಗ್ದಾಳಿ ನಡೆಸಿದರು.

ಓದಿ:ಯಡಿಯೂರಪ್ಪ ತಮಗೆ ಕಣ್ಣೀರಿನ ನೋವು ಕೊಟ್ಟವರಾರು ಎಂಬುದನ್ನು ಬಹಿರಂಗಪಡಿಸಲಿ : ಕೆಪಿಸಿಸಿ ಸಾರಥಿ ಡಿಕೆಶಿ

ABOUT THE AUTHOR

...view details