ಮೈಸೂರು: ಇಂದು ತಮ್ಮ ನಿವಾಸದ ಎದುರು ಕಾಯ್ದು ನಿಂತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ, ಕಾರಿನಲ್ಲಿ ಕುಳಿತು ಜನರ ಅಹವಾಲುಗಳನ್ನು ಆಲಿಸಿ ಹೊರಟು ಹೋಗಿರುವ ಘಟನೆ ನಡೆದಿದೆ.
ಎರಡು ದಿನಗಳಿಂದ ಸಿದ್ದು ಸರಣಿ ಸಭೆ.. ಮಾಧ್ಯಮಗಳಿಗೆ ನೋ ಎಂಟ್ರಿ..! - undefined
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಿನ್ನೆ ಮೈಸೂರಿಗೆ ಆಗಮಿಸಿದ್ದು, ವರುಣ ಕ್ಷೇತ್ರದ ಜನರ ಸಮಸ್ಯೆ ಹಾಗೂ ಕ್ಷೇತ್ರದ ಸ್ಥಳೀಯ ನಾಯಕರ ಜೊತೆ ಸರಣಿ ಸಭೆ ನಡೆಸುತ್ತಿದ್ದಾರೆ.

ಎರಡು ದಿನಗಳಿಂದ ಸಿದ್ದು ಸರಣಿ ಸಭೆ
ಎರಡು ದಿನಗಳಿಂದ ಸಿದ್ದು ಸರಣಿ ಸಭೆ
ಹೌದು, ನಿನ್ನೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ನೇರವಾಗಿ ಖಾಸಗಿ ಹೋಟೆಲ್ಗೆ ತೆರಳಿ, ವರುಣ ಕ್ಷೇತ್ರದ ಜನರ ಸಮಸ್ಯೆ ಹಾಗೂ ಕ್ಷೇತ್ರದ ಸ್ಥಳೀಯ ನಾಯಕರ ಜೊತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಅವರ ಮಗ ಹಾಗೂ ಶಾಸಕ ಯತೀಂದ್ರ ಜೊತೆಯಾಗಿದ್ದು, ನಿನ್ನೆ ದಿನವಿಡೀ ಸಭೆ ನಡೆಸಿದ್ದಾರೆ. ಇಂದು ಸಹ ಸಭೆ ಮುಂದುವರೆಸಿದ್ದು, ಸಭೆಗೆ ಮಾಧ್ಯಮದವರನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.