ಮೈಸೂರು:ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಹುಟ್ಟೂರಿನ ವ್ಯಕ್ತಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಸಾವಿರ ರೂಪಾಯಿ ನೀಡುವ ಮೂಲಕ ಸಹಾಯ ಮಾಡಿರುವ ಘಟನೆ ಇಂದು ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಎರಡು ಸಾವಿರ ರೂಪಾಯಿ ನೀಡಿದ ಸಿದ್ದರಾಮಯ್ಯ.. - ಮಾಜಿ ಮುಖ್ಯಮಂತ್ರಿ
ಸಿದ್ದರಾಮಯ್ಯನವರ ಸಿದ್ದರಾಮನಹುಂಡಿ ಗ್ರಾಮದ ಮನೆಗೆ ಕರಿಗೌಡ ಎಂಬ ವ್ಯಕ್ತಿ ಸಹಾಯ ಕೇಳಲು ಬಂದು ಪರದಾಡಿದ್ದಾರೆ. ಗ್ರಾಮಸ್ಥರು ಈ ವಿಷಯವನ್ನು ಅವರಿಗೆ ತಿಳಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಎರಡು ಸಾವಿರ ನೀಡುವ ಮೂಲಕ ಸಹಾಯ ಮಾಡಿರುವ ಘಟನೆ ಇಂದು ನಡೆದಿದೆ.
Siddaramaiah
ನಗರದ ರಾಮಕೃಷ್ಣನಗರದಲ್ಲಿರುವ ಸಿದ್ದರಾಮಯ್ಯನವರ ಮನೆಗೆ ಸಿದ್ದರಾಮನಹುಂಡಿ ಗ್ರಾಮದ ಕರಿಗೌಡ ಎಂಬ ವ್ಯಕ್ತಿ ಸಹಾಯ ಕೇಳಲು ಬಂದು ಪರದಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರು ತಿ.ನರಸೀಪುರ ಪಟ್ಟಣಕ್ಕೆ ತಮ್ಮ ಕಾರಿನಲ್ಲಿ ಹೊರಟಾಗ ಅಲ್ಲಿದ್ದ ಗ್ರಾಮಸ್ಥರು ವಿಷಯವನ್ನು ತಿಳಿಸಿದ್ದಾರೆ.ಗ್ರಾಮಸ್ಥರು ಕರಿಗೌಡರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಸಹಾಯ ಮಾಡುವಂತೆ ಸಿದ್ದರಾಮಯ್ಯ ಅವರನ್ನು ಹೇಳಿದಾಗ ಸಿದ್ದರಾಮಯ್ಯನವರು ಗ್ರಾಮಸ್ಥರ ಕೈಗೆ ಎರಡು ಸಾವಿರ ನೀಡಿ ಔಷಧಿ ತೆಗೆದುಕೊಳ್ಳುವಂತೆ ಹೇಳಿ ಹೊರಟು ಹೋದರು.