ಕರ್ನಾಟಕ

karnataka

ETV Bharat / state

'ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ' ಯತೀಂದ್ರ ಹೇಳಿಕೆ ಮೂಲಕ ಡಿಕೆಶಿಗೆ ಸಂದೇಶ ರವಾನೆ: ಪ್ರತಾಪ್ ಸಿಂಹ - ಸಿದ್ದರಾಮಯ್ಯ ಪುತ್ರ ಯತೀಂದ್ರ

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯ ಹಠ ಹಿಡಿದು ಮೊದಲ ಅವಧಿಗೆ ಸಿಎಂ ಆದರು, ಸಿಎಂ ಕುರ್ಚಿ ಮೇಲೆ ಕೂತ ಮೇಲೆ ಪೂರ್ಣಾವಧಿ ಸಿಎಂ ಆಗುವ ಪ್ಲಾನ್ ಮಾಡಿದ್ದಾರೆ. ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಹಾಗೂ ರಾಜಣ್ಣ, ಯತೀಂದ್ರ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.

MP Pratap Simha spoke to the media.
ಸಂಸದ ಪ್ರತಾಪ್ ಸಿಂಹ ಮಾಧ್ಯಮದವರ ಜೊತೆ ಮಾತನಾಡಿದರು.

By ETV Bharat Karnataka Team

Published : Jan 17, 2024, 3:37 PM IST

Updated : Jan 17, 2024, 6:07 PM IST

ಸಂಸದ ಪ್ರತಾಪ್ ಸಿಂಹ ಮಾಧ್ಯಮದವರ ಜೊತೆ ಮಾತನಾಡಿದರು.

ಮೈಸೂರು:ಸಿದ್ದರಾಮಯ್ಯನವರುಮಗ ಯತೀಂದ್ರನ ಕಡೆಯಿಂದ ಪೂರ್ಣಾವಧಿ ಸಿಎಂ ಎಂದು ಹೇಳಿಕೆ ಕೊಡಿಸುವ ಮೂಲಕ ಡಿ ಕೆ ಶಿವಕುಮಾರ್​ಗೆ ಸಂದೇಶ ರವಾನಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪೂರ್ಣಾವಧಿ ಸಿಎಂ ಆಗುವ ಪ್ಲಾನ್:ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು, ನಮ್ಮ ತಂದೆ ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಡಿ ಕೆ ಶಿವಕುಮಾರ್ ಬಗ್ಗೆ ನನಗೆ ಪಾಪ ಅನಿಸುತ್ತದೆ. ಎಸ್ ಎಂ ಕೃಷ್ಣ ನಂತರ ಮತ್ತೊಂದು ಅವಕಾಶ ಬಂದಿದೆ ಅಂತ ಡಿ ಕೆ ಶಿವಕುಮಾರ್ ಚುನಾವಣೆ ಮುನ್ನ ಒಕ್ಕಲಿಗರಿಗೆ ಹೇಳಿದ್ದರು ಎಂದರು.

ಡಿ ಕೆ ಶಿವಕುಮಾರ್ ಪಕ್ಷವನ್ನು ಸಮರ್ಥವಾಗಿ ಕಟ್ಟಿದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯ ಹಠ ಹಿಡಿದು ಮೊದಲ ಅವಧಿಗೆ ಸಿಎಂ ಆದರು. ಸಿಎಂ ಕುರ್ಚಿಯಲ್ಲಿ ಕೂತಮೇಲೆ ಪೂರ್ಣಾವಧಿ ಸಿಎಂ ಆಗುವ ಪ್ಲಾನ್ ಮಾಡಿದ್ದಾರೆ. ಅದಕ್ಕೆ ಸಚಿವರಾದ ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಹಾಗೂ ರಾಜಣ್ಣ ಮೂಲಕ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಈಗ ಮಗ ಯತೀಂದ್ರ ಮೂಲಕ ಪೂರ್ಣಾವಧಿ ಸಿಎಂ ಎಂದು ಹೇಳಿಕೆ ಕೊಡಿಸಿ, ಡಿ ಕೆ ಶಿವಕುಮಾರ್ ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರೆ ನಿಮ್ಮ ವಿರೋಧಿ:ಸ್ವಜಾತಿ ಹಾಗೂ ಮುಸ್ಲಿಮರು ನಮ್ಮ ತಂದೆಯ ಕೈ ಹಿಡಿದಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಹಾಗೂ ವರುಣಾದಲ್ಲಿ ಮತ ಹಾಕಿದ್ದು ಲಿಂಗಾಯತರು ಹಾಗೂ ಒಕ್ಕಲಿಗರಲ್ಲವೇ ಎಂದು ಪ್ರತಾಪ್​ ಸಿಂಹ ಪ್ರಶ್ನಿಸಿದರು. ಡಿ ಕೆ ಶಿವಕುಮಾರ್ ಎದೆಗೆ ಸಿದ್ದರಾಮಯ್ಯ ಮಗನ ಹೆಗಲ ಮೇಲೆ ಗನ್ ಇಟ್ಟು ಹೊಡೆದಿದ್ದಾರೆ. ಡಿ ಕೆ ಶಿವಕುಮಾರ್ ಅವರೇ ನಿಮ್ಮ ವಿರೋಧಿಗಳು ಬೇರೆ ಎಲ್ಲಿಯೂ ಇಲ್ಲ, ನಿಮ್ಮ ಪಕ್ಷದಲ್ಲಿ ಇದ್ದಾರೆ.

ಸಿದ್ದರಾಮಯ್ಯನವರೆ ನಿಮ್ಮ ವಿರೋಧಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ 39 ಜನ ಲಿಂಗಾಯತರು ಗೆದ್ದಿದ್ದಾರೆ, ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಒಕ್ಕಲಿಗರು ಮತ ಹಾಕಿದರು. ನಿಮಗೆಲ್ಲ ದೋಖಾ ಆಗಿದೆ. ಎಲ್ಲರ ನಡುವೆ ಜಗಳ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಾರೆ. ಅವರಿಗೆ ತಮ್ಮ ಸ್ವಜಾತಿ ಹಾಗೂ ಮುಸ್ಲಿಮರ ಮೇಲೆ ಮಾತ್ರ ಪ್ರೀತಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಅಯೋಧ್ಯೆಗೆ ಮೈಸೂರಿನಿಂದ ವಿಶೇಷ ರೈಲು: ಅಯೋಧ್ಯೆಗೆ ಫೆಬ್ರವರಿ 4ರಿಂದ ಫೆಬ್ರವರಿ 15ರ ವರೆಗೆ ದಿನಕ್ಕೊಂದು ವಿಶೇಷ ರೈಲು ಸಂಚಾರ ಮಾಡಲಿದೆ. ಮೊದಲ ರೈಲು ಫೆಬ್ರವರಿ 4 ರಂದು ರಾತ್ರಿ 12 ಗಂಟೆ 5 ನಿಮಿಷಕ್ಕೆ ಪ್ರಯಾಣ ಆರಂಭಿಸಲಿದೆ. 1280 ಆಸನಗಳ ವ್ಯವಸ್ಥೆ ಇದ್ದು. ಇದಕ್ಕಾಗಿ ತಯಾರಿ ನಡೆಸುತ್ತಿದ್ದೇವೆ. ಕೋಲಾರದಲ್ಲಿ ರಾಮನ ಫ್ಲೆಕ್ಸ್ ಹರಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಸಂಸದರು, ಕಾಂಗ್ರೆಸ್ ಆಡಳಿತದಲ್ಲಿ ರಾಮನಿಗೆ ಮನ್ನಣೆ ಇಲ್ಲ ಎಂಬುದು ಸದಾಕಾಲದ ಸತ್ಯ. ರಾಜ್ಯದಲ್ಲಿ ರಾಮಭಕ್ತರಿಗೆ ಪೂರಕವಾದ ಸರ್ಕಾರ ಇಲ್ಲ ಎಂಬುದು ಜನರಿಗೆ ಅರ್ಥವಾಗುತ್ತಿದೆ ಎಂದು ಆರೋಪಿಸಿದರು.

ವಿಮಾನ ಹಾರಾಟ ಕಡಿಮೆ : ಸಂಸದರ ಕೊಟ್ಟ ಉತ್ತರ ಹೀಗಿದೆ
ಮೈಸೂರು ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಕಡಿಮೆಯಾಗಲು ಕಾರಣ ಏನು ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ಕೆಲವು ವಿಮಾನಗಳ ರಿಪೇರಿ ಕೆಲಸ ನಡೆಯುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಈ ನಿರ್ಧಾರ ಮಾಡಲಾಗಿದೆ. ಏರ್ ಇಂಡಿಯಾ ಸೇರಿದಂತೆ ಇತರ ಕಂಪನಿಗಳನ್ನು ಸಂಪರ್ಕ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮೈಸೂರು ವಿಮಾನ ನಿಲ್ದಾಣದಿಂದ ಹೆಚ್ಚಿನ ಸಂಖ್ಯೆಯ ವಿಮಾನಗಳು ಹಾರಾಟ ನಡೆಸಲಿವೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ತಿಳಿಸಿದರು.

ಇದನ್ನೂಓದಿ:ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸುವುದು, ಬಿಡುವುದು ಹೈಕಮಾಂಡ್​​ಗೆ ಬಿಟ್ಟದ್ದು: ಪರಮೇಶ್ವರ್

Last Updated : Jan 17, 2024, 6:07 PM IST

ABOUT THE AUTHOR

...view details