ಮೈಸೂರು:ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಗಣಪತಿ ದೇವಸ್ಥಾನದಲ್ಲಿ 101 ಈಡುಗಾಯಿ ಹೊಡೆದು ಪೂಜೆ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ಶೀಘ್ರವೇ ಗುಣಮುಖರಾಗಲಿ ಎಂದು 101 ಈಡುಗಾಯಿ ಹೊಡೆದು ಪೂಜೆ - ಮೈಸೂರು
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನವರು ಕೊರೊನಾ ದಿಂದ ಬೇಗ ಗುಣಮುಖರಾಗಲೆಂದು ಗಣಪತಿಗೆ 101 ಈಡುಗಾಯಿ ಹೊಡೆದು ಅವರ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.
Ganapathi temple
ನಗರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ಪೌರ ಕಾರ್ಮಿಕ ಬಂಧುಗಳು ಹಾಗೂ ಎಂ.ಕೆ ಸೋಮಶೇಖರ್ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿ ಎಂದು ದೇವಸ್ಥಾನದ ಮುಂದೆ 101 ಈಡುಗಾಯಿ ಹೊಡೆದು, ಅಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.