ಕರ್ನಾಟಕ

karnataka

ETV Bharat / state

ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ನನ್ನನ್ನು ರಾಜಕೀಯ ದ್ವೇಷದಿಂದ ಸೋಲಿಸಬೇಕೆಂದು ನಿಂತಿದ್ದಾರೆ: ಸಿದ್ದರಾಮಯ್ಯ - ವರುಣಾ ಕ್ಷೆತ್ರದಲ್ಲಿ ಸಿದ್ದರಾಮಯ್ಯನವರು ಬಿರುಸಿನ ಪ್ರಚಾರ

ಚುನಾವಣೆ ಹಿನ್ನೆಲೆ ವರುಣಾ ಕ್ಷೆತ್ರದಲ್ಲಿ ಸಿದ್ದರಾಮಯ್ಯನವರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

cng
ವರುಣಾ ಅಭ್ಯರ್ಥಿ ಸಿದ್ದರಾಮಯ್ಯ

By

Published : Apr 22, 2023, 3:29 PM IST

Updated : Apr 22, 2023, 4:09 PM IST

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡುತ್ತಿರುವ ಸಿದ್ದರಾಮಯ್ಯ

ಮೈಸೂರು: ಆರ್ ಎಸ್ ಎಸ್ ನವರು ಹಾಗೂ ಬಿಜೆಪಿಯವರು ರಾಜಕೀಯ ದ್ವೇಷದಿಂದ ನನ್ನನ್ನು ಸೋಲಿಸಬೇಕೆಂದು ನಿಂತಿದ್ದಾರೆ‌. ಆದ್ದರಿಂದ ವರುಣಾದಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ. ನನಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್. ಸಂತೋಷ್ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದ್ದು, ದೇಶದ ಗಮನ ಸೆಳೆದಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿನವಿಡೀ ಹಲವು ಗ್ರಾಮಗಳಲ್ಲಿ ರೋಡ್ ಶೋ ಹಾಗೂ ಗ್ರಾಮಗಳಲ್ಲಿ ಸಣ್ಣ ಸಣ್ಣ ಸಭೆಗಳನ್ನು ನಡೆಸಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್​ನಲ್ಲಿ ಸುತ್ತೂರು ಹೆಲಿಪ್ಯಾಡ್​ಗೆ ಆಗಮಿಸಿದ ಸಿದ್ದರಾಮಯ್ಯನವರು, ಹೆಲಿಪ್ಯಾಡ್​ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, 1978 ರಿಂದಲೂ ಅಂದರೆ ವರುಣಾ ಕ್ಷೇತ್ರ ಆಗುವ ಮೊದಲೇ, ಈ ಭಾಗದಿಂದಲೇ ಸ್ಪರ್ಧೆ ಮಾಡುತ್ತಿದ್ದೇನೆ. ಪ್ರತಿದಿನ ನನಗೆ ಜನರು ಆತ್ಮವಿಶ್ವಾಸದಿಂದ ಇರಿ ಎಂದು ಹೇಳುತ್ತಿದ್ದಾರೆ. ವರುಣಾದಲ್ಲಿ ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅರ್ ಎಸ್ ಎಸ್ ನವರು ಹಾಗೂ ಬಿಜೆಪಿಯವರು ರಾಜಕೀಯ ದ್ವೇಷಕ್ಕಾಗಿ ನನ್ನನ್ನು ಸೋಲಿಸಬೇಕೆಂದೇ ನಿಂತಿದ್ದಾರೆ. ಆದರೆ ಇಲ್ಲಿನ ಮತದಾರರು ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ವರುಣಾದ ಬಗ್ಗೆ ಸಿದ್ದರಾಮಯ್ಯನವರಿಗೆ ಆತಂಕ ಇದೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿ, ಪ್ರತಾಪ್ ಸಿಂಹ ಯಾರು, ಅವನಿಗೂ ವರುಣಾಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು, ಸಿಎಂ ಬಸವರಾಜ ಬೊಮ್ಮಾಯಿಯವರ ಟೀಕೆಗೂ ಸಹ ಉತ್ತರಿಸಿ, ಮೊದಲು ಮುಖ್ಯಮಂತ್ರಿಗಳು ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಸಿದ್ದರಾಮೇಶ್ವರನಿಗೆ ಪೂಜೆ :ಸುತ್ತೂರು ಹೆಲಿಪ್ಯಾಡ್​ನಿಂದ ವರುಣಾ ಕ್ಷೇತ್ರದ ಕಾರ್ಯ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ, ಗ್ರಾಮದಲ್ಲಿ ‌ಕಾರ್ಯ ಸಿದ್ದೇಶ್ವರ ದೇವಾಲಯಕ್ಕೆ ಆಗಮಿಸಿ, ಸಿದ್ದರಾಮೇಶ್ವರನ ದರ್ಶನ ಪಡೆದ ಬಳಿಕ ರೋಡ್ ಶೋ ಆರಂಭಿಸಿದರು. ಸಿದ್ದರಾಮಯ್ಯನವರ ರೋಡ್ ಶೋ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಕೂಗು ಕೇಳಿ ಬಂತು.

ಇಂದು ಬೆಳಗ್ಗೆ 11 ಗಂಟೆಯಿಂದ ವರುಣಾ ಕ್ಷೇತ್ರದ ಕಾರ್ಯ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿರುವ ಸಿದ್ದರಾಮಯ್ಯ, ನಂತರ ಕಾರ್ಯಪುರ, ಹಾಡ್ಯ, ಬಾಣೂರು, ಚಿನ್ನಂಬಳ್ಳಿ, ತಗಡೂರು, ವರಹಳ್ಳಿ, ಚುಂಚನಹಳ್ಳಿ, ಹನುಮನಪುರ, ದಾಸನೂರು , ಕಾರ್ಯ ಮೊಳೆ, ತೊರಳ್ಳಿ, ಚಿಕ್ಕ ಹೊಮ್ಮನ ಮೋಳೆ, ಅಂಕುಶರಾಯನಪುರ, ಚಿಕ್ಕ ಹೊಮ್ಮ ಹಾಗೂ ದೊಡ್ಡ ಹೊಮ್ಮ, ಕೊನೆಯದಾಗಿ ಅವತಾರಪುರದಲ್ಲಿ, ಸಂಜೆ 7 ಗಂಟೆಯವರೆಗೆ ವರುಣಾ ವ್ಯಾಪ್ತಿಯ 16 ಗ್ರಾಮಗಳಲ್ಲಿ ಚುನಾವಣಾ ಪ್ರಚಾರವನ್ನು ಸಿದ್ದರಾಮಯ್ಯ ಕೈಗೊಳ್ಳಲಿದ್ದಾರೆ. ಇದರ ಜೊತೆಗೆ ಕೊನೆಯ ಎರಡು ದಿನ ಸಹ ವರುಣಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವುದಾಗಿ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಇದನ್ನೂ ಓದಿ:ಸಿಎಂ ಪರ ಭರ್ಜರಿ ಪ್ರಚಾರ.. ಮತದಾರರ ಮನವೊಲಿಕೆಗೆ ಮುಂದಾದ ಬೊಮ್ಮಾಯಿ ಪತ್ನಿ

Last Updated : Apr 22, 2023, 4:09 PM IST

ABOUT THE AUTHOR

...view details