ಮೈಸೂರು: ಸೋಮಣ್ಣ ಮತ್ತು ಪ್ರತಾಪ್ ಸಿಂಹ ಅವರು ನೀಡುವ ರಾಜಕೀಯ ಹೇಳಿಕೆಗಳಿಗೆ ಮಾಧ್ಯಮದವರು ಏಕೆ ಹೆಚ್ಚು ಮನ್ನಣೆ ನೀಡುತ್ತಿದ್ದೀರಿ ಗೊತ್ತಿಲ್ಲ. ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಇಂದು ಚುನಾವಣಾ ಪ್ರಚಾರಕ್ಕೆ ವರುಣಗೆ ಹೋಗುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಿಗೆ ಪ್ರಚಾರಕ್ಕೆ ಬರುವುದಾದರೆ ನನ್ನ ಜೊತೆ ಬನ್ನಿ ಎಂದು ಆಹ್ವಾನಿಸಿದರು.
ಗುರುವಾರ ನಟ ಶಿವರಾಜಕುಮಾರ್ ಹಾಗೂ ಇತರ ಸ್ಟಾರ್ ಪ್ರಚಾರಕರು ವರುಣದಲ್ಲಿ ಪ್ರಚಾರಕ್ಕೆ ಬಂದ ಬಗ್ಗೆ, ಸೋಮಣ್ಣ ಹಾಗೂ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನೀವು ಸೋಮಣ್ಣ ಮತ್ತು ಪ್ರತಾಪ್ ಸಿಂಹಗೆ ಏಕೆ ಹೆಚ್ಚಿನ ಮನ್ನಣೆ ಕೊಡುತ್ತೀರಿ ಎಂದು ಮಾಧ್ಯದವರನ್ನು ಪ್ರಶ್ನಿಸಿದರು. ಈ ಬಗ್ಗೆ ನಟ ಶಿವರಾಜ್ ಕುಮಾರ್ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಅದೇ ಸಾಕು, ನಾನು ಈ ಬಗ್ಗೆ ಏನನ್ನು ಹೇಳಬೇಕಾಗಿಲ್ಲ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ ಪ್ರಣಾಳಿಕೆಯನ್ನ ಸುಟ್ಟಿರುವ ಈಶ್ವರಪ್ಪನವರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿ ಈಶ್ವರಪ್ಪ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಸಿದ್ದರಾಮಯ್ಯ ತಿರುಗೇಟು ನೀಡಿದರು.
ವರುಣದಲ್ಲಿ ಸ್ಟಾರ್ ಪ್ರಚಾರಕರೊಂದಿಗೆ ಸಿದ್ದರಾಮಯ್ಯ ಅಬ್ಬರದ ಪ್ರಚಾರ:ಸಿದ್ದರಾಮಯ್ಯ ನಿನ್ನೆ ನಟ ಶಿವರಾಜ್ ಕುಮಾರ್, ನಟಿ ರಮ್ಯಾ, ನಿಶ್ಮಿಕಾ ನಾಯ್ಡು, ಜೊತೆ 12 ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಎರಡನೇ ದಿನವಾದ ಇಂದು ಬೆಳಗ್ಗೆ 9 ಗಂಟೆಯಿಂದಲೇ 23 ಗ್ರಾಮಗಳಲ್ಲಿ ನಟ ದುನಿಯಾ ವಿಜಯ್, ನಟ ಯೋಗಿ ಜೊತೆ ಚಿಕ್ಕಳ್ಳಿ ಗ್ರಾಮದಿಂದ ರೋಡ್ ಶೋ ಆರಂಭಿಸಿದ ಅವರು, ಭುಗತಗಳ್ಳಿ, ವಾಜಮಂಗಲ, ಹಾರೋಹಳ್ಳಿ, ಶಿವಪುರ, ಪಟ್ಟೆಹುಂಡಿ, ಮಾದೇಗೌಡನ ಹುಂಡಿ, ರಂಗನಾಥಪುರ, ರಂಗಚಾರಿ ಹುಂಡಿ, ರಂಗ ಸಮುದ್ರ, ಇಟ್ಟುವಳ್ಳಿ, ಕುಪ್ಯ, ತುಮುಲ, ಮುತ್ತತ್ತಿ, ಆರ್ ಪಿ ಹುಂಡಿ, ಎಡೆದೊರೆ, ಹಳೇ ತಿರುಮಲಕೂಡು, ಹೊಸ ತಿರುಮಲಕೂಡು ಸೇರಿದಂತೆ ಹಲವು ಗ್ರಾಮಗಳಿಗೆ ತೆರಳಿ ಸಿದ್ದರಾಮಯ್ಯ ಮಾತ ಯಾಚಿಸಿದರು.
ಇದನ್ನೂ ಓದಿ:ಆಯತಪ್ಪಿದ ಸೋಮಣ್ಣನನ್ನ ಹಿಡಿದೆತ್ತಿದ ಸುದೀಪ್: ಫ್ಯಾನ್ಸ್ ನೂಕುನುಗ್ಗಲು, ಪೊಲೀಸರಿಂದ ಲಾಠಿ ಚಾರ್ಜ್