ಕರ್ನಾಟಕ

karnataka

ETV Bharat / state

’ಜೆಡಿಎಸ್,  ಬಿಜೆಪಿ ಇಬ್ಬರೂ ನಮಗೆ ವೈರಿಗಳೇ’: ಸಿದ್ದರಾಮಯ್ಯ - Siddaramaiah Campaign

ಜನ ಬಿಜೆಪಿಯಿಂದ ದುಡ್ಡು ತೆಗೆದುಕೊಂಡು ಕಾಂಗ್ರೆಸ್​ಗೆ ಮತ ಹಾಕುತ್ತಾರೆ ಇದನ್ನು ನಿನ್ನೆ ಹಿರೇಕೆರೂರಿಗೆ ಚುನಾವಣಾ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಜನರೇ ಮುಂಬೈ ನೋಟು ಕಾಂಗ್ರೆಸ್​ಗೆ ವೋಟು ಎಂದು ಹೇಳುತ್ತಿದ್ದಾರೆ ಎಂದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಸ್ಥಾನವನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Siddaramaiah
ಜೆಡಿಎಸ್ ಮತ್ತು ಬಿಜೆಪಿ ಇಬ್ಬರು ನಮಗೆ ವೈರಿಗಳು: ಸಿದ್ದರಾಮಯ್ಯ

By

Published : Dec 3, 2019, 11:29 AM IST

ಮೈಸೂರು:ಖರ್ಗೆ 15 ಕ್ಷೇತ್ರಗಳನ್ನು ಗೆದ್ದು ಸಿಹಿ ಹಂಚುತ್ತೇವೆ ಎಂದು ಹೇಳಿದ್ದಾರೆ.‌ ನಾವು ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ಇಬ್ಬರು ನಮಗೆ ವೈರಿಗಳು. ನಾವು 15 ಸ್ಥಾನ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಇಬ್ಬರು ನಮಗೆ ವೈರಿಗಳು: ಸಿದ್ದರಾಮಯ್ಯ

ಇಂದು ಹುಣಸೂರು ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸಿದ ಸಿದ್ದರಾಮಯ್ಯ, ಜನ ಬಿಜೆಪಿಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಅನರ್ಹರು ದುಡ್ಡಿಗಾಗಿ ಪಕ್ಷಾಂತರ ಮಾಡಿದ್ದಾರೆ. ಜನ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನನ್ನ ಬಗ್ಗೆ ಮಾತನಾಡುವ ಮೊದಲು ನಿನ್ನೆ ಚುನಾವಣಾ ಪ್ರಚಾರದಲ್ಲಿ ಏಕೆ ಘೇರಾವ್ ಹಾಕಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪಾಪ ಅವರು ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಿ. ಶ್ರೀನಿವಾಸ್ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ನಿನ್ನೆ ಕುಮಾರಸ್ವಾಮಿ ಡಿ.9 ರ ನಂತರ ಸರ್ಕಾರ ಉಳಿಯುವುದಿಲ್ಲ, ಖರ್ಗೆ ಸಿಎಂ ಆಗುತ್ತಾರೆ ಎಂಬ ಹೇಳಿಕೆ ಸುಳ್ಳು. ಅವರು ಹಾಗೆ ಹೇಳಿಲ್ಲ. ಮಾಧ್ಯಮಗಳೇ ಅದನ್ನು ಅರ್ಥ ಕಲ್ಪಸಿ ಸುದ್ದಿ ಮಾಡಿದ್ದಾರೆ. ಖರ್ಗೆ ಅವರು 15 ಸ್ಥಾನ ಗೆದ್ದು ಸಿಹಿ ಹಂಚುತ್ತೇವೆ ಎಂದು ಹೇಳಿದ್ದಾರೆ ವಿನಹಃ ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ನಾವು ಈ ಚುನಾವಣೆಯಲ್ಲಿ ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿ ಎಷ್ಟು ವೈರಿನೋ ಜೆಡಿಎಸ್ ಕೂಡ ಅಷ್ಟೇ ವೈರಿ. 15 ಕ್ಕೆ 15 ಸ್ಥಾನವನ್ನು ಗೆಲ್ಲುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ 1 ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details