ಕರ್ನಾಟಕ

karnataka

ETV Bharat / state

ಕೊರೊನಾ ಸಂಕಷ್ಟ ಪರಿಹಾರ: ಸುತ್ತೂರು ಶ್ರೀಗಳಿಂದ ಇಷ್ಟಲಿಂಗ ಪೂಜೆ - Shri Shivaratri Desi Kendra Swamiji Worship

ಕೊರೊನಾ ವೈರಸ್​ನಿಂದ ಪ್ರಪಂಚವೇ ತಲ್ಲಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸುತ್ತೂರು ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಇಷ್ಟಲಿಂಗ ಪೂಜೆ ಮಾಡಿದರು. ಇಂದಿನ ಆತಂಕಕಾರಿ ಸಂಕಷ್ಟ ನಿವಾರಣೆಗೊಂಡು ಸಮಸ್ತ ಜನತೆಗೆ ಆರೋಗ್ಯ-ನೆಮ್ಮದಿ ಸಿಗಲೆಂದು ಪ್ರಾರ್ಥನೆ ಸಲ್ಲಿಸಿದರು.

Shri Shivaratri Desi Kendra Swamiji
ಕೊರೊನಾ ಸಂಕಷ್ಟ ಪರಿಹಾರಕ್ಕೆ ಸುತ್ತೂರು ಶ್ರೀಗಳಿಂದ ಇಷ್ಟಲಿಂಗ ಪೂಜೆ

By

Published : Apr 13, 2020, 10:30 PM IST

ಮೈಸೂರು: ನಾಡಿಗೆ ಬಂದಿರುವ ಕೊರೊನಾ ಕಂಟಕ ನಿವಾರಣೆಯಾಗಲೆಂದು ಸುತ್ತೂರು ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು.

ಕೊರೊನಾ ಸಂಕಷ್ಟ ಪರಿಹಾರಕ್ಕೆ ಸುತ್ತೂರು ಶ್ರೀಗಳಿಂದ ಇಷ್ಟಲಿಂಗ ಪೂಜೆ
ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಸವ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಇಂದು ಸಂಜೆ 7 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಇಷ್ಟಲಿಂಗ ಪೂಜೆಯನ್ನು ಸುತ್ತೂರು ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು.

ಕೊರೊನಾ ವೈರಸ್​ನಿಂದ ಪ್ರಪಂಚವೇ ತಲ್ಲಣಗೊಂಡಿದ್ದು, ಈ ಸಂಕಷ್ಟ ನಿವಾರಣೆಯಾಗಲೆಂದು ಪೀಠಾಧಿಪತಿ ಲಿಂಗ ಪೂಜೆ ನೆರವೇರಿಸಿ, ಸಂಕಷ್ಟದಿಂದ ಮುಕ್ತಿ ಹೊಂದಿ ಜನತೆಗೆ ಆರೋಗ್ಯ, ನೆಮ್ಮದಿ ದೊರೆಯಲೆಂದು ಪ್ರಾರ್ಥಿಸಿದರು.

For All Latest Updates

ABOUT THE AUTHOR

...view details