ಮೈಸೂರು:ದೇವರಾಜ ಅರಸು ರಸ್ತೆಯಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿ ನಗದು, ಬಟ್ಟೆ ಹಾಗೂ ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.
ಮೈಸೂರಲ್ಲಿ ಸರಣಿ ಅಂಗಡಿ ಕಳ್ಳತನ: ಬೆಂಗಳೂರಲ್ಲಿ ಇಬ್ಬರು ಆರೋಪಿಗಳ ಬಂಧನ - ಸರಣಿ ಅಂಗಡಿ ಕಳ್ಳತನ ಪ್ರಕರಣ
ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಮೂರು ಶೋ ರೂಮ್ಗಳಿಗೆ ಕನ್ನ ಹಾಕಿ ಸರಣಿ ಕಳ್ಳತನ ಮಾಡಿದ್ದ ಬೆಂಗಳೂರು ಮೂಲದ ಸೈಯದ್ ಮೊಹಮ್ಮದ್ ಫೈಸಲ್ ಮತ್ತು ಜುನೈದ್ ಅಹಮದ್ ಎಂಬುವವರನ್ನು ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಆರ್.ಟಿ. ನಗರದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ನಗರದ ದೇವರಾಜ ಅರಸು ರಸ್ತೆಯಲ್ಲಿ ಮೂರು ಶೋ ರೂಮ್ಗಳಿಗೆ ಕನ್ನ ಹಾಕಿ ಸರಣಿ ಕಳ್ಳತನ ಮಾಡಿದ್ದ ಬೆಂಗಳೂರು ಮೂಲದ ಸೈಯದ್ ಮೊಹಮ್ಮದ್ ಫೈಸಲ್ ಮತ್ತು ಜುನೈದ್ ಅಹಮದ್ ಎಂಬುವವರನ್ನು ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಆರ್.ಟಿ. ನಗರದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ವಿಚಾರಣೆ ವೇಳೆ ದೇವರಾಜ ಅರಸು ರಸ್ತೆಯ 3 ಅಂಗಡಿ ಹಾಗೂ ಕೆ.ಆರ್. ಪೋಲಿಸ್ ಠಾಣಾ ವ್ಯಾಪ್ತಿಯ ಒಂದು ಬಟ್ಟೆ ಅಂಗಡಿಯಲ್ಲಿ ಕಳವು ಮಾಡಿರುವುದು ಒಪ್ಪಿಕೊಂಡಿದ್ದಾರೆ. ಈ ಆರೋಪಿಗಳಿಂದ 1.15 ಲಕ್ಷ ನಗದು, ಒಂದು ಲಕ್ಷ ರೂ. ಮೌಲ್ಯದ ಬಟ್ಟೆಗಳು, ಕೃತ್ಯಕ್ಕೆ ಬಳಸಿದ ಒಂದು ಕಾರು ವಶಪಡಿಕೊಳ್ಳಲಾಗಿದೆ. ಪ್ರಕರಣವನ್ನು ತನಿಖೆ ನಡೆಸಿದ ದೇವರಾಜ ಠಾಣಾ ಪೋಲಿಸರು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.