ಕರ್ನಾಟಕ

karnataka

ETV Bharat / state

ಶೋಭಕ್ಕ ತಾಳ್ಮೆಯಿಂದ ವರ್ತಿಸ್ಬೇಕು, ಹೆಣ್ಮಕ್ಕಳ ಬಾಯಲ್ಲಿ ಇಂತ ಮಾತು ಬರ್ಬಾರ್ದು : ಎಂಬಿ ಪಾಟೀಲ್​ - etv bharat

ಎಂಬಿ ಪಾಟೀಲ್​ಗೆ ಕಾನೂನಿನ ಜ್ಞಾನವಿಲ್ಲವೆಂದು ಹೇಳಿದ್ದ ಶೋಭಾ ಕರದ್ಲಾಜೆಗೆ ಗೃಹ ಸಚಿವ ಎಂಬಿ ಪಾಟೀಲ್​ ತಿರುಗೇಟು ನೀಡಿದ್ದು, ಶೋಭಾ ಕರಂದ್ಲಾಜೆ ಒಬ್ಬ ಹೆಣ್ಣು ಮಗಳು ಅವರ ಬಾಯಲ್ಲಿ ಇಂತಹ ಮಾತುಗಳು ಬರಬಾರದು ಎಂರು. ನಾವು ಬಿಜಾಪುರದವರು ನಮ್ಮ ನಾಯಲ್ಲಿ ಏನೇನೊ ಬರುತ್ತವೆ. ಆದ್ರೆ ಅವರ ಬಾಯಲ್ಲಿ ಬರಬಾರದು ಎಂದರು

ನಮ್​​ ಶೋಭಕ್ಕ ತಾಳ್ಮೆಯಿಂದ ವರ್ತಿಸ್ಬೇಕು

By

Published : Jun 17, 2019, 4:42 PM IST

ಮೈಸೂರು:ಗೃಹಮಂತ್ರಿಗೆ ಕಾನೂನಿನ ಜ್ಞಾನವಿಲ್ಲವೆಂದು ಹೇಳಿದ ಸಂಸದೆ ಶೋಭಾ ಕರಂದ್ಲಾಜೆಗೆ ಗೃಹಮಂತ್ರಿ ಎಂ.ಬಿ.ಪಾಟೀಲ್ ತಿರುಗೇಟು ನೀಡಿದರು.

ನಮ್​​ ಶೋಭಕ್ಕ ತಾಳ್ಮೆಯಿಂದ ವರ್ತಿಸ್ಬೇಕು : ಎಂಬಿ ಪಾಟೀಲ್​ ಟಾಂಗ್​​

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ದೊಡ್ಡ ಮೇಧಾವಿಗಳು, ಅವರು ಹೆಣ್ಣು ಮಗಳಾದ್ದರಿಂದ ನಾನು ಸೂಕ್ಷ್ಮವಾಗಿ ಮಾತನಾಡಿದ್ದೇನೆ ಎಂದರು.

ಇನ್ನು ಶೋಭಾ ಕರಂದ್ಲಾಜೆ ಹೆಣ್ಣು ಮಗಳು. ಅವರು ಇಂತಹ ಮಾತುಗಳನ್ನು ಆಡಬಾರದು. ಇವರ ಅಭಿಪ್ರಾಯಗಳಿದ್ದರೆ ಕ್ಯಾಬಿನೆಟ್​ ಕಮಿಟಿ ಮುಂದೆ ಹೇಳಲಿ. ನಂತರ ಕ್ಯಾಬಿನೆಟ್​ ಸಮಿತಿಯ ವರದಿ ಬರುವವರೆಗೆ ಶೋಭಕ್ಕ ತಾಳ್ಮೆಯಿಂದ ವರ್ತಿಸಲಿ ಎಂದರು.

ಇನ್ನು ಮುಂದೆ ಮಾತಮಾಡಿದ ಪಾಟೀಲ್​, ನಾವು ಬಿಜಾಪುರದವರು ನಮ್ಮ ಬಾಯಲ್ಲಿ ಏನೇನೊ ಬರುತ್ತವೆ, ಆದ್ರೆ ಹೆಣ್ಣು ಮಗಳಾಗ ಶೋಭ ಕರಂದ್ಲಾಜೆ ಬಾಯಲ್ಲಿ ಇಂತಹ ಮಾತುಗಳು ಬರಬಾರದು ಎಂದರು.

ABOUT THE AUTHOR

...view details