ಮೈಸೂರು:ಕೋವಿಡ್ನಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಪೌರಕಾರ್ಮಿಕನ ತಾಯಿಯನ್ನು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಎದೆಗಪ್ಪಿಕೊಂಡು ಸಮಾಧಾನ ಪಡಿಸಿದ್ದಾರೆ.
ಕೊರೊನಾದಿಂದ ಪೌರಕಾರ್ಮಿಕ ಸಾವು: ಮೃತನ ತಾಯಿ ಎದೆಗಪ್ಪಿಕೊಂಡು ಆಯುಕ್ತೆ ಶಿಲ್ಪಾನಾಗ್ ಸಾಂತ್ವನ - ಶಿಲ್ಪಾನಾಗ್
ಮೈಸೂರು ಪಾಲಿಕೆಯಲ್ಲಿ ಕೊರೊನಾ ಸೇವೆಯಲ್ಲಿದ್ದ ಪೌರಕಾರ್ಮಿಕ ಕೊರೊನಾದಿಂದ ಮೃತಪಟ್ಟ ಹಿನ್ನೆಲೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ್ದಾರೆ.
ಮೃತನ ತಾಯಿಯನ್ನು ಎದೆಗಪ್ಪಿಕೊಂಡು ಆಯುಕ್ತೆ ಶಿಲ್ಪಾನಾಗ್ ಸಾಂತ್ವನ
ಪಾಲಿಕೆಯಲ್ಲಿ ಶವ ಸಾಗಿಸುವ ವಾಹನ ಚಾಲಕನಾಗಿ ಸುಮಾರು 400 ಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದ ರವಿ ಕೊರೊನಾಗೆ ಬಲಿಯಾಗಿದ್ದ.
ಮೃತನ ಮನೆಗೆ ಭೇಟಿ ನೀಡಿದ ಪಾಲಿಕೆ ಆಯುಕ್ತೆ ( IAS ) ಅಧಿಕಾರಿ ಶಿಲ್ಪಾನಾಗ್ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ತೀವ್ರ ದುಃಖಿತರಾದ ಮೃತ ರವಿ ತಾಯಿಯನ್ನು ಶಿಲ್ಪಾ ನಾಗ್ ಎದೆಗಪ್ಪಿಕೊಂಡು ಸಮಾಧಾನಪಡಿಸಿದ ದೃಶ್ಯ ಪೌರಕಾರ್ಮಿಕರ ಕಣ್ಣಲ್ಲಿ ಕಣ್ಣೀರು ತರಿಸಿತು.