ಕರ್ನಾಟಕ

karnataka

ETV Bharat / state

ಕುರಿಗಾಹಿ ಹುಲಿಗೆ ಬಲಿ: ವ್ಯಾಘ್ರನ ಸೆರೆಗೆ ಶಾಸಕರ ಸೂಚನೆ - Shepherd died by tiger at mysore

ಕುರಿ ಮೇಯಿಸಲು ಹೋದ ಕುರಿಗಾಹಿಯನ್ನು ಹುಲಿ ತಿಂದು ಹಾಕಿರುವ ಘಟನೆ ಮೈಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನೆರಳಕುಪ್ಪೆ ಬಿ‌ ಹಾಡಿ ಬಳಿ ನಡೆದಿದೆ.

ಕುರಿಗಾಹಿಯನ್ನು ತಿಂದ ಹುಲಿ
ಕುರಿಗಾಹಿಯನ್ನು ತಿಂದ ಹುಲಿ

By

Published : May 26, 2020, 6:22 PM IST

Updated : May 26, 2020, 6:43 PM IST

ಮೈಸೂರು:ನಿನ್ನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನೆರಳಕುಪ್ಪೆ ಬಿ‌ ಹಾಡಿ ಬಳಿ ಕುರಿ ಮೇಯಿಸಲು ಹೋದ ಕುರಿಗಾಹಿ ನಾಪತ್ತೆಯಾಗಿದ್ದು, ಆತ ಹುಲಿಗೆ ಬಲಿಯಾಗಿದ್ದಾನೆ ಎಂದು ಇಂದು ತಿಳಿದುಬಂದಿದೆ.

ನಿನ್ನೆ ಸಂಜೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನೆರಳಕುಪ್ಪೆ ಬಿ‌ ಹಾಡಿ ಬಳಿ ಜಗದೀಶ್ ಎಂಬುವರು ಕುರಿ ಮೇಯಿಸಲು ಹೋಗಿದ್ದರು. ಇಂದು ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ತಲೆ ಬುರುಡೆ ಮತ್ತು ಕೈ ಹಂದಿಹಳ್ಳದ ಬಳಿ ಪತ್ತೆಯಾಗಿದೆ.

ಇದರ ಆಧಾರದ ಮೇಲೆ ಜಗದೀಶ್​ ಎಂಬುವರು ಹುಲಿಗೆ ಬಲಿಯಾಗಿದ್ದಾನೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿಸಿಎಫ್ ಮಹೇಶ್ ಕುಮಾರ್ ಖಚಿತಪಡಿಸಿದ್ದಾರೆ.

ಸ್ಥಳಕ್ಕೆ ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕುಟುಂಬದ ಸದಸ್ಯರಿಗೆ ಅರಣ್ಯ ಇಲಾಖೆಯಿಂದ ನೌಕರಿ ಕೊಡಿಸುವ ಭರವಸೆ‌ ನೀಡಿದ್ದಾರೆ.

Last Updated : May 26, 2020, 6:43 PM IST

ABOUT THE AUTHOR

...view details