ಕರ್ನಾಟಕ

karnataka

ETV Bharat / state

ಉದ್ಯಮಿ ಶರತ್​ ಆತ್ಮಹತ್ಯೆ ಪ್ರಕರಣ : ಮೊದಲನೇ ಆರೋಪಿಯ ಅರ್ಜಿ ವಜಾ, ಅಪ್ಪಣ್ಣನಿಗೆ ಜಾಮೀನು ಸಂಕಷ್ಟ - ಶರತ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಾಮೀನು ವಜಾ

ಪ್ರವೀಣ್ ನಡೆಸುತ್ತಿದ್ದ ಸ್ವದೇಶಿ ಎಂಬ ಸೋಲಾರ್ ಮತ್ತು ಯುಪಿಎಸ್ ಹಾಗೂ ಮನೆಯ ಇಂಟಿರಿಯರ್ಸ್ ಕಂಪನಿಯಲ್ಲಿ ಶರತ್‌ ಪಾಲುದಾರನಾಗಿದ್ದ. ಪ್ರವೀಣ್‌ ಶೇ.50ರಷ್ಟು ಪಾಲುದಾರಿಕೆ ಮಾಡಿಕೊಂಡಿದ್ದ. ನಂತರ ಉದ್ಯಮದಲ್ಲಿ ಪಾರ್ಟನ್‌ಶಿಪ್‌ನಿಂದ ಶರತ್‌ನನ್ನ ತೆಗೆದು ಹಾಕಿ ಶೇ.50ರಷ್ಟು ಹಣ ವಾಪಸ್ ನೀಡದೇ ವಂಚಿಸಿದ್ದ ಎಂಬ ಆರೋಪ ಕೇಳಿ ಬಂದಿದೆ..

Businessman Sharath suicide case, Sharath suicide case main accused bail reject, Mysore crime news, ಉದ್ಯಮಿ ಶರತ್ ಆತ್ಮಹತ್ಯೆ ಪ್ರಕರಣ, ಶರತ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಾಮೀನು ವಜಾ, ಮೈಸೂರು ಅಪರಾಧ ಸುದ್ದಿ,
ಮೊದಲನೇ ಆರೋಪಿಯ ಅರ್ಜಿ ವಜಾ, ಅಪ್ಪಣ್ಣನಿಗೆ ಜಾಮೀನು ಸಂಕಷ್ಟ

By

Published : May 11, 2022, 12:10 PM IST

ಮೈಸೂರು :ಉದ್ಯಮಿ ಶರತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ಮೊದಲ ಆರೋಪಿ ಪ್ರವೀಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ದೇವರಾಜ್ ಅವರು, ಪ್ರಕರಣದ ಮೊದಲ ಆರೋಪಿ ಪ್ರವೀಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಈ ಹಿನ್ನೆಲೆ ಇದೀಗ ಪ್ರಕರಣದ ಎರಡನೇ ಆರೋಪಿಯಾಗಿರುವ ಅಪ್ಪಣ್ಣಗೆ ಸಂಕಷ್ಟ ಎದುರಾಗಿದೆ.

ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್​ ಅಧ್ಯಕ್ಷ‌ ಅಪ್ಪಣ್ಣ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಡೆತ್‌ನೋಟ್‌ನಲ್ಲಿ ಅಣ್ಣಪ್ಪನ ಹೆಸರು ಬರೆದು ಮೈಸೂರಿನ ಗಣೇಶ ನಗರದ ನಿವಾಸಿ ಉದ್ಯಮಿ ಶರತ್‌ ಏಪ್ರಿಲ್ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಅಪ್ಪಣ್ಣ ಹಾಗೂ ಪ್ರವೀಣ್ ಎಂಬುವರ ಮೇಲೆ ಎಫ್‌ಐಆರ್ ದಾಖಲಾಗಿತ್ತು.

ಓದಿ:ಶರತ್​ ಆತ್ಮಹತ್ಯೆ ಪ್ರಕರಣ: ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷನ ವಿರುದ್ಧ ಎಫ್ಐಆರ್

ಜಂಗಲ್‌ ಲಾಡ್ಜ್​ ಮತ್ತು ರೆಸಾರ್ಟ್‌ನ ಅಧ್ಯಕ್ಷರಾಗಿರುವ ಅಪ್ಪಣ್ಣ, ಉದ್ಯಮಿ ಶರತ್‌ ಅವರಿಂದ 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ, ಸಾಲವನ್ನು ವಾಪಸ್‌ ಕೊಟ್ಟಿರಲಿಲ್ಲ. ಪ್ರವೀಣ್‌ ಎಂಬಾತ ಕೂಡ ಇವರಿಗೆ ಪಾಲುದಾರಿಕೆಯಲ್ಲಿ ವಂಚನೆ ಮಾಡಿದ್ದ. ಒಂದೆಡೆ ಪಾಲುದಾರಿಕೆಯಲ್ಲಿ ವಂಚನೆ ಮತ್ತೊಂದೆಡೆ ಸಾಲ ಪಡೆದ ಅಪ್ಪಣ್ಣನಿಂದಲೂ ವಂಚನೆ ಆರೋಪ ಕೇಳಿ ಬಂದಿತ್ತು. ಇದರಿಂದ ಬೇಸತ್ತು ಶರತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರವೀಣ್ ನಡೆಸುತ್ತಿದ್ದ ಸ್ವದೇಶಿ ಎಂಬ ಸೋಲಾರ್ ಮತ್ತು ಯುಪಿಎಸ್ ಹಾಗೂ ಮನೆಯ ಇಂಟಿರಿಯರ್ಸ್ ಕಂಪನಿಯಲ್ಲಿ ಶರತ್‌ ಪಾಲುದಾರನಾಗಿದ್ದ. ಪ್ರವೀಣ್‌ ಶೇ.50ರಷ್ಟು ಪಾಲುದಾರಿಕೆ ಮಾಡಿಕೊಂಡಿದ್ದ. ನಂತರ ಉದ್ಯಮದಲ್ಲಿ ಪಾರ್ಟನ್‌ಶಿಪ್‌ನಿಂದ ಶರತ್‌ನನ್ನ ತೆಗೆದು ಹಾಕಿ ಶೇ.50ರಷ್ಟು ಹಣ ವಾಪಸ್ ನೀಡದೇ ವಂಚಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ನೊಂದಿದ್ದ ಶರತ್‌ ಆಗಾಗ ಪತ್ನಿ ಕೃಪಾಲಿನಿ ಬಳಿ ತನ್ನ ನೋವನ್ನ ಹೇಳಿಕೊಳ್ಳುತ್ತಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ನಲ್ಲಿ ಪ್ರವೀಣ್ ಹಾಗೂ ಅಪ್ಪಣ್ಣ ಹೆಸರನ್ನು ಅವರು ಉಲ್ಲೇಖಿಸಿದ್ದು, ಇವರಿಬ್ಬರ ಮೇಲೂ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಎನ್.ಆರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶರತ್ ಪತ್ನಿ ಕೃಪಾಲಿನಿ ದೂರು ದಾಖಲಿಸಿದ್ದಾರೆ.

ABOUT THE AUTHOR

...view details