ಕರ್ನಾಟಕ

karnataka

ETV Bharat / state

ಶರನ್ನವರಾತ್ರಿ ಸಂಭ್ರಮ: ಅರಮನೆ ಆವರಣದಲ್ಲಿನ ಧಾರ್ಮಿಕ ಕೈಂಕರ್ಯಗಳ ಮಾಹಿತಿ

ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆಚರಣೆಯಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಈ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ.

Sharanavavaratri Religious rituals
ಶರನ್ನವರಾತ್ರಿ ಆಚರಣೆ

By

Published : Oct 13, 2021, 6:03 PM IST

Updated : Oct 13, 2021, 6:27 PM IST

ಮೈಸೂರು: ರಾಜಪರಂಪರೆಯ ಸಂಪ್ರದಾಯದಂತೆ ಶರನ್ನವರಾತ್ರಿ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ಈ ಕುರಿತಂತೆ ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಅರಮನೆ ಆವರಣದಲ್ಲಿ ಜರುಗಿದ ಧಾರ್ಮಿಕ ಕೈಂಕರ್ಯಗಳ ಕುರಿತು ಗ್ರೌಂಡ್​ ರಿಪೋರ್ಟ್​

ಯದು ವಂಶಸ್ಥರು ನಡೆಸುವ ಶರನ್ನವರಾತ್ರಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಕಳೆದ 7 ದಿನಗಳಿಂದ ಅರಮನೆಯಲ್ಲಿ ಶರನ್ನವರಾತ್ರಿಯ ಪೂಜಾ ವಿಧಿ ವಿಧಾನಗಳು ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿವೆ. ನಿತ್ಯ ಅರಮನೆಯಲ್ಲಿನ ಪಟ್ಟದ ಕುದುರೆ, ಹಸು, ಆನೆ, ಒಂಟೆಗೆ ರಾಜ ಪರಂಪರೆಯಂತೆ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಮಂಗಳವಾದ್ಯದೊಂದಿಗೆ ಕಲ್ಯಾಣ ತೊಟ್ಟಿಗೆ ಬಂದು ಪೂಜೆ ಸಲ್ಲಿಸಲಾಗುತ್ತದೆ.

ಶರನ್ನವರಾತ್ರಿಯ ಆರನೇ ದಿನ ಸರಸ್ವತಿ ಪೂಜೆ, ಕಾಳರಾತ್ರಿ ಪೂಜೆ ನೆರವೇರಿದ್ದು, ಅ.14 ರಂದು 11.02 ರಿಂದ 11.22 ರ ಶುಭಲಗ್ನದಲ್ಲಿ ಹಿಂದೆ ರಾಜರು ಬಳಸುತ್ತಿದ್ದ ಚಿನ್ನದ ಕತ್ತಿ, ಸೇರಿದಂತೆ ‌ಪ್ರಮುಖ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ಆ ನಂತರ ಅಕ್ಟೋಬರ್ 15 ರಂದು ವಿಜಯಯಾತ್ರೆ ಮಾಡಿ ಭುವನೇಶ್ವರಿ ದೇವಾಲಯ ಒಳಗಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ವಿಜಯದಶಮಿಯನ್ನು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಚರಿಸುತ್ತಾರೆ.

ಹೀಗೆ ಅಕ್ಟೋಬರ್ 7 ರಿಂದ ರಾಜವಂಶಸ್ಥರು ಅಕ್ಟೋಬರ್ 15 ರವರೆಗೆ ಶರನ್ನವರಾತ್ರಿಯನ್ನು ರಾಜಪರಂಪರೆಯಂತೆ ಆಚರಿಸುತ್ತಾರೆ.

ಇದನ್ನೂ ಓದಿ:ಈ ಸಾರಿ ಮನೆಯಲ್ಲೇ ಕೂತು ಜಂಬೂಸವಾರಿ ನೋಡಿ.. ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ

Last Updated : Oct 13, 2021, 6:27 PM IST

ABOUT THE AUTHOR

...view details