ಕರ್ನಾಟಕ

karnataka

ETV Bharat / state

ತಿ. ನರಸೀಪುರದ ಶಾಹಿ ಗಾರ್ಮೆಂಟ್ಸ್​ ಮಹಿಳಾ ಸಿಬ್ಬಂದಿ ಕೊರೊನಾಗೆ ಬಲಿ - Mysore coronavirus death toll

ಶಾಹಿ ಗಾರ್ಮೆಂಟ್ಸ್​ನ ಮಹಿಳಾ ಕಾರ್ಮಿಕರೊಬ್ಬರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಮೈಸೂರು ತಾಲೂಕು ಆಡಳಿತ ಆದೇಶಕ್ಕೆ ಕ್ಯಾರೆ ಎನ್ನದೇ ಕೆಲಸ ನಡೆಸುತ್ತಿರುವ ಗಾರ್ಮೆಂಟ್ಸ್​ ಕಂಪನಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shahi Garments labor dead by Covid
ಶಾಹಿ ಗಾರ್ಮೆಂಟ್ಸ್​ನ ಮಹಿಳಾ ಸಿಬ್ಬಂದಿ ಕೊರೊನಾಗೆ ಬಲಿ

By

Published : May 9, 2021, 11:45 AM IST

ಮೈಸೂರು: ಶಾಹಿ ಗಾರ್ಮೆಂಟ್ಸ್​ನ ಮಹಿಳಾ ಕಾರ್ಮಿಕರೊಬ್ಬರು ಕೊರೊನಾ ಮಹಾಮಾರಿಗೆ ಬಲಿಯಾಗಿರುವ ಘಟನೆ ತಿ.ನರಸೀಪುರ ತಾಲೂಕಿನ ನಡೆದಿದೆ.

ಟಿ.ದೊಡ್ಡಪುರ ಗ್ರಾಮದ ಗೀತಾ (36) ಮೃತ ಮಹಿಳೆ. ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಕಾರ್ಖಾನೆ ಬಂದ್ ಮಾಡುವಂತೆ ಆದೇಶಿಸಿದ್ದರೂ ಕ್ಯಾರೆ ಎನ್ನದ ಗಾರ್ಮೆಂಟ್ಸ್ ಮಾಲೀಕ

ತಾಲೂಕಿನಾದ್ಯಂತ ಕೋವಿಡ್ ಹೆಚ್ಚಾದ ಹಿನ್ನೆಲೆಯಲ್ಲಿ‌ ಗಾರ್ಮೆಂಟ್ಸ್ ಮುಚ್ಚುವಂತೆ ತಾಲೂಕು ಆಡಳಿತ ಆದೇಶ ನೀಡಿದೆ. ಆದರೆ ಶಾಹಿ ಗಾರ್ಮೆಂಟ್ಸ್ ಕಂಪನಿಯಲ್ಲಿ
ಕೆಲಸ ನಡೆಯುತ್ತಿದೆ. ಇದನ್ನು ಸಾರ್ವಜನಿಕರು, ಗ್ರಾಮಸ್ಥರ ವಿರೋಧಿಸಿದರೂ ಮಾಲೀಕರು ಕ್ಯಾರೇ ಎನ್ನುತ್ತಿಲ್ಲವಂತೆ.

ನರಸೀಪುರ ತಾಲೂಕಿನಲ್ಲಿ ಕೊರೊನಾ ಹೆಚ್ಚಾಗಲು ಶಾಹಿ ಗಾರ್ಮೆಂಟ್ಸ್ ಕಾರಣವಾಗುತ್ತಿದೆ ಎಂದು ತಾಲೂಕಿನ ರೈತ‌ ಮುಖಂಡ ವಿದ್ಯಾಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details