ಮೈಸೂರು: ಜಿಲ್ಲೆಯಲ್ಲಿ ಇಂದು ಮತ್ತೆ ಹೊಸ 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಟ್ಟಾರೆ ಮೈಸೂರಿನಲ್ಲಿ 28 ಕೊವಿಡ್-19 ಪ್ರಕರಣಗಳಾಗಿವೆ.
ಮೈಸೂರಿನಲ್ಲಿ ಮತ್ತೆ 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ - ಮೈಸೂರು ಕೊರೊನಾ ಪ್ರಕರಣ
ಮೈಸೂರು ಜಿಲ್ಲೆಯಲ್ಲಿ ಇಂದು ಮತ್ತೆ ಹೊಸ 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 28 ಕೊವಿಡ್-19 ಪ್ರಕರಣಗಳಾಗಿವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
7 ಪ್ರಕರಣಗಳಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಇದಲ್ಲದೆ ಓರ್ವ ಜುಬಿಲಿಯಂಟ್ ಕಾರ್ಖಾನೆಯ ವ್ಯಕ್ತಿ ಜೊತೆ ಪ್ರಯಾಣ ಬೆಳೆಸಿದವನಲ್ಲೂ ಸೋಂಕು ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದ್ದಾರೆ.
ಹಾಗೆಯೇ ಇನ್ನೂ ಇಬ್ಬರ ಪ್ರಯಾಣದ ಬಗ್ಗೆ ವರದಿಗಾಗಿ ಕಾಯಲಾಗುತ್ತಿದ್ದು, ಗುರುವಾರ 21 ಪ್ರಕರಣ ಪಾಸಿಟಿವ್ ಇತ್ತು. ಶುಕ್ರವಾರ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿರಲಿಲ್ಲ. ಇಂದು ಜಿಲ್ಲೆಯಲ್ಲಿ 7 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಒಟ್ಟು 28 ಪಾಸಿಟಿವ್ ಪ್ರಕರಣ ಇಲ್ಲಿಯವರೆಗೆ ವರದಿಯಾಗಿವೆ. ಸೋಂಕಿತರೆಲ್ಲರನ್ನೂ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.