ಕರ್ನಾಟಕ

karnataka

ETV Bharat / state

ಸಿಎಂ ಯಡಿಯೂರಪ್ಪಗೆ ಹಿರಿಯ ಸಾಹಿತಿಗಳಿಂದ ಪತ್ರ... ಯಾವ ಕಾರಣಕ್ಕೆ ಈ ಲೆಟರ್​​? - ಮುಖ್ಯಮಂತ್ರಿಗೆ ಪತ್ರ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಬಹಿರಂಗ ಪತ್ರ ಬರೆದ ಹಿರಿಯ ಸಾಹಿತಿಗಳು.

Mysore
Mysore

By

Published : Jun 2, 2020, 3:50 PM IST

ಮೈಸೂರು:ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಸ್ಥಾನಮಾನ ಪಡೆಯಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ, ಪದ್ಮಶ್ರೀ ಪುರಸ್ಕೃತ ದೇವನೂರ ಮಹಾದೇವ ಸೇರಿದಂತೆ 25 ಹಿರಿಯ ಸಾಹಿತಿಗಳು ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಕರ್ನಾಟಕದ ಸಾಹಿತಿಗಳು, ಅಭಿಮಾನಿಗಳು ಹಾಗೂ ಅವತ್ತು ಅಂದರೆ 2008ರಲ್ಲಕಿ ನೀವೇ ಸಿಎಂ ಆಗಿದ್ದು, ನಿಮ್ಮ ಹೋರಾಟದ ಫಲವಾಗಿಯೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿತ್ತು. ಇದರ ಪರಿಣಾಮವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರ ಸ್ಥಾಪನೆಯಾಗಿತ್ತು. ಆ ಕೇಂದ್ರಕ್ಕೆ ಈಗ ಸ್ವಾಯತ್ತ ಸ್ಥಾನಮಾನ ದೊರಕುವಂತೆ ಮಾಡಬೇಕಿದೆ. ಇದಕ್ಕೆ ತಾವು ಶ್ರಮ ಹಾಕಿ ಕೆಲಸ ಮಾಡಬೇಕಾಗಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details