ಕರ್ನಾಟಕ

karnataka

By

Published : Dec 22, 2022, 9:59 AM IST

ETV Bharat / state

ಮೈಸೂರು ಇತಿಹಾಸದಲ್ಲೇ ಮೊದಲ ಮಹಿಳಾ ಎಸ್​ಪಿ: ಅಧಿಕಾರ ಸ್ವೀಕರಿಸಿದ ಸೀಮಾ ಲತ್ಕರ್

ನಿರ್ಗಮಿತ ಎಸ್​ಪಿ ಆರ್ ಚೇತನ್ ಅವರು, ನೂತನ‌ ಎಸ್​ ಪಿ ಸೀಮಾ ಲತ್ಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

Seema Latkar first woman SP in history of Mysore
ಅಧಿಕಾರ ಸ್ವೀಕರಿಸಿದ ಸೀಮಾ ಲತ್ಕರ್

ಮೈಸೂರು: ಮೈಸೂರಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಹಿಳೆಯೊಬ್ಬರು ಅಧಿಕಾರ ಸ್ವೀಕರಿಸಿದ್ದು, ಸೀಮಾ ಲತ್ಕರ್ ಎಸ್​ಪಿ ಪಟ್ಟ ಅಲಂಕರಿಸಿದ್ದಾರೆ.

ಮೈಸೂರು ಜಿಲ್ಲೆಗೆ ಎಸ್​ಪಿ ಹುದ್ದೆ ಸೃಷ್ಟಿಯಾದಾಗಿನಿಂದ, ಪುರುಷರೇ ಎಸ್​ಪಿ ಹುದ್ದೆ ಅಲಂಕರಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಎಸ್​ಪಿ ಖುರ್ಚಿಯಲ್ಲಿ ಕುಳಿತಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್​ಪಿ)‌ ಸ್ನೇಹ ಕಾರ್ಯನಿರ್ವಹಿಸಿ ತೆರಳಿದ್ದರು. ಈಗ ಎಎಸ್​ಪಿ ಹುದ್ದೆಯಲ್ಲಿಯೂ ಮಹಿಳೆ (ಎಎಸ್​ಪಿ ನಂದಿನಿ) ಇದ್ದಾರೆ.

ಎಸ್​ಪಿ ಹಾಗೂ ಎಎಸ್​ಪಿ ಹುದ್ದೆಯಲ್ಲಿ ಮಹಿಳೆಯರ ದರ್ಬಾರ್ ಬುಧವಾರದಿಂದ ಶುರುವಾಗಿದೆ. ನಿರ್ಗಮಿತ ಎಸ್​ಪಿ ಆರ್ ಚೇತನ್ ಅವರು, ನೂತನ‌ ಎಸ್​ ಪಿ ಸೀಮಾ ಲತ್ಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಮೈಸೂರು ಎಸ್ಪಿ, ಡಿಸಿಪಿ ವರ್ಗಾವಣೆ:ಮೈಸೂರು ಎಸ್ಪಿ ಆರ್​ ಚೇತನ್ ಹಾಗೂ ಕಾನೂನು ವಿಭಾಗದ ಡಿಸಿಪಿ ಪ್ರದೀಪ್ ಗುಂಟೆ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ನೂತನ ಎಸ್ಪಿಯಾಗಿ ಸೀಮಾ ಲತ್ಕರ್, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಎಂ.ಮುತ್ತರಾಜು ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರಿನ ಎಸ್ಪಿ ಆಗಿದ್ದ ಆರ್ ಚೇತನ್ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆ ಎಸ್ಪಿಯಾಗಿ ವರ್ಗಾಯಿಸಿದ್ದು, ಮೈಸೂರು ಡಿಸಿಪಿಯಾಗಿದ್ದ ಪ್ರದೀಪ್ ಗುಂಟಿ ಅವರಿಗೆ ಸ್ಥಳ ನಿಯೋಜನೆ ಆಗಿಲ್ಲ.

ಇದನ್ನೂ ಓದಿ:ಮೈಸೂರು ಜಿಲ್ಲಾಧಿಕಾರಿಯಾಗಿ ಡಾ.ಕೆ.ವಿ.ರಾಜೇಂದ್ರ ಅಧಿಕಾರ ಸ್ವೀಕಾರ

ABOUT THE AUTHOR

...view details