ಕರ್ನಾಟಕ

karnataka

ETV Bharat / state

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಟಾಪರ್​​​​: ಇಬ್ಬರಿಗೂ ಸಿವಿಲ್ ಸರ್ವೀಸ್ ಮೇಲೆ ಕಣ್ಣು!

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಮೈಸೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಈಟಿವಿ ಭಾರತದ ಜೊತೆ ಮಾತನಾಡಿದ್ದು, ಐಎಎಸ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

Secondary PUC result
ಪಿಯುಸಿಯಲ್ಲಿ ವಿದ್ಯಾರ್ಥಿನಿಯರು ಟಾಪರ್

By

Published : Jul 14, 2020, 3:18 PM IST

ಮೈಸೂರು: ಕೊರೊನಾ ವೈರಸ್​ ಭೀತಿ ನಡುವೆಯೂ ಪರೀಕ್ಷೆ ಬರೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದು ಮಹತ್ವದ ದಿನವಾಗಿದ್ದು, ಫಲಿತಾಂಶ ಪ್ರಕಟವಾಗಿದೆ.

ಅತಿ ಹೆಚ್ಚು ಅಂಕ ಗಳಿಸಿದ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಸಿವಿಲ್ ಸರ್ವೀಸ್ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ.

ಪಿಯುಸಿಯಲ್ಲಿ ಟಾಪರ್​ ಆದ ವಿದ್ಯಾರ್ಥಿನಿಯರು

ಹುಣಸೂರು ತಾಲೂಕಿನ ಬಿಳಿಕೆರೆ ನಿವಾಸಿಯಾಗಿರುವ ಬಿ.ಎನ್.ಸ್ಪಂದನ 600 ಅಂಕಗಳಿಗೆ 582 ಅಂಕ ಗಳಿಸಿದ್ದಾರೆ. ‌‌ಕನ್ನಡ -96, ಇಂಗ್ಲಿಷ್ -90, ಇತಿಹಾಸ-100, ಅರ್ಥಶಾಸ್ತ್ರ-100, ಭೂಗೋಳಶಾಸ್ತ್ರ-98, ರಾಜ್ಯಶಾಸ್ತ್ರ-98 ಅಂಕ ಪಡೆದಿದ್ದಾರೆ.

ಮೈಸೂರಿನ ಸರಸ್ವತಿಪುರಂ ನಿವಾಸಿಯಾಗಿರುವ ಎನ್.ಲಕ್ಷ್ಮೀ 600 ಅಂಕಗಳಿಗೆ 578 ಅಂಕ ಗಳಿಸಿದ್ದಾರೆ. ಕನ್ನಡ-94, ಇಂಗ್ಲಿಷ್-95, ಅರ್ಥಶಾಸ್ತ್ರ-98, ಭೂಗೋಳ-100, ಸಮಾಜಶಾಸ್ತ್ರ-96 ಅಂಕ ಪಡೆದಿದ್ದಾರೆ.

ABOUT THE AUTHOR

...view details