ಕರ್ನಾಟಕ

karnataka

ETV Bharat / state

ದ್ವಿತೀಯ ಪಿಯುಸಿ ಫಲಿತಾಂಶ: ಕಲಾ-ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಿಂದ ಮೈಸೂರಿಗೆ ಕೀರ್ತಿ - ಬೃಂದಾ

ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಮೈಸೂರು ಜಿಲ್ಲೆಯ ಬಿಜಿಎಸ್ ಪಿಯು ಕಾಲೇಜಿನ ಬೃಂದಾ ಜೆ.ಎನ್ ವಾಣಿಜ್ಯ ವಿಭಾಗದಲ್ಲಿ 596 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮರಿಮಲ್ಲಪ್ಪ ಪಿ.ಯು‌. ಕಾಲೇಜಿನ ವಿದ್ಯಾರ್ಥಿನಿ ಬಿ.ಎನ್. ಸ್ಪಂದನ ಕಲಾ ವಿಭಾಗದಲ್ಲಿ 600ಕ್ಕೆ 582 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪರ್​ ಆಗಿ ಹೊರಹೊಮ್ಮಿದ್ದಾಳೆ.

BN spandana
ಬಿ.ಎನ್.ಸ್ಪಂದನ

By

Published : Jul 14, 2020, 2:03 PM IST

ಮೈಸೂರು: ಜಿಲ್ಲೆಯ ಬಿಜಿಎಸ್ ಪಿಯು ಕಾಲೇಜಿನ ಬೃಂದಾ ಜೆ.ಎನ್. ವಾಣಿಜ್ಯ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾಳೆ.

ನಗರದ ಮರಿಮಲ್ಲಪ್ಪ ಪಿ.ಯು‌. ಕಾಲೇಜಿನ ವಿದ್ಯಾರ್ಥಿನಿ ಬಿ.ಎನ್. ಸ್ಪಂದನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 600ಕ್ಕೆ 582 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

ಕಲಾ ವಿಭಾಗದ ವಿದ್ಯಾರ್ಥಿನಿಯಾದ ಈಕೆ ಹುಣಸೂರು ತಾಲೂಕಿನ ಬಿಳಿಕೆರೆ ನಿವಾಸಿಯಾಗಿದ್ದು, ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದಾಳೆ.

ಕನ್ನಡ-96, ಇಂಗ್ಲಿಷ್-90, ಇತಿಹಾಸ-100, ಅರ್ಥಶಾಸ್ತ್ರ-100, ಭೂಗೋಳ ಶಾಸ್ತ್ರ-98, ರಾಜ್ಯಶಾಸ್ತ್ರ-98 ಸೇರಿದಂತೆ ಒಟ್ಟಾರೆ 600 ಅಂಕಗಳಿಗೆ 582 ಅಂಕಗಳನ್ನು ಗಳಿಸಿದ್ದಾಳೆ. ಈಕೆ ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮದ ಶಿಕ್ಷಕರ ಪುತ್ರಿಯಾಗಿದ್ದಾಳೆ.

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಬೃಂದಾ ಜೆ.ಎನ್:ನಗರದ ಬಿಜಿಎಸ್ ಪಿಯು ಕಾಲೇಜಿನ ಬೃಂದಾ ಜೆ.ಎನ್ ವಾಣಿಜ್ಯ ವಿಭಾಗದಲ್ಲಿ 596 ಅಂಕ ಪಡೆದು ರಾಜ್ಯಕ್ಕೆ 2ನೇ ಸ್ಥಾನ ಅಲಂಕರಿಸಿದ್ದಾಳೆ. ಕನ್ನಡದಲ್ಲಿ 100 ಅಂಕ, ಅರ್ಥಶಾಸ್ತ್ರ 100, ಬಿಸಿನೆಸ್ ಸ್ಟಡಿ 100, ಅಕೌಂಟೆನ್ಸಿ 100, ಕಂಪ್ಯೂಟರ್ ಸೈನ್ಸ್ 100 ಹಾಗೂ ಇಂಗ್ಲಿಷ್ ನಲ್ಲಿ 96 ಅಂಕ ಪಡೆದಿದ್ದಾಳೆ.

ಈ ವಿದ್ಯಾರ್ಥಿನಿ ಇಂಗ್ಲಿಷ್ ಪರೀಕ್ಷಾ ಸಮಯದಲ್ಲಿ ಆರೋಗ್ಯ ಸರಿಯಿಲ್ಲದ ಕಾರಣ 4 ಅಂಕ ಕಡಿಮೆಯಾಗಿವೆ. ಉಳಿದಂತೆ ಎಲ್ಲಾ ವಿಷಯಗಳಲ್ಲೂ 100 ಅಂಕ ಪಡೆದು, ಇಂಗ್ಲಿಷ್ ನಲ್ಲಿ ಮಾತ್ರ 96 ಬಂದಿದೆ ಎಂದು ದೂರವಾಣಿಯಲ್ಲಿ 'ಈಟಿವಿ ಭಾರತ್'ಗೆ ತಿಳಿಸಿದ್ದಾಳೆ.

ABOUT THE AUTHOR

...view details