ಮೈಸೂರು: ಜೀವನ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸುತ್ತೇನೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಜೀವನದ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದೇನೆ: ಮಾಜಿ ಸಚಿವ ರಾಮದಾಸ್ - second innings of life had begun : Said by Former minister Ramdas
ಇಲ್ಲಿಯವೆರೆಗಿನ ಬದುಕೇ ಬೇರೆ, ಇದೀಗ ಜೀವನದ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದೇನೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು. ಹೃದಯಾಘಾತದಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾಜಿ ಸಚಿವರು ಮಾತನಾಡಿದ್ದಾರೆ.

ಹೃದಯಾಘಾತದಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮದಾಸ್, ದೇವರ ದಯೆ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಹುಷಾರಾಗಿದ್ದೇನೆ. ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಅಧಿವೇಶನಕ್ಕೆ ಹೋಗಲು ಆಗಿಲ್ಲ. ನನ್ನದೊಂದು ಪುನರ್ಜನ್ಮ, ಇಲ್ಲಿಯವರೆಗಿನ ಬದುಕೇ ಬೇರೆ. ಇದೀಗ ಜೀವನದ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದೇನೆ. ನನ್ನ ದೇಹದಲ್ಲಿ ಕೊಲೆಸ್ಟ್ರಾಲ್ ಇಲ್ಲ. ಪ್ರತಿದಿನ ಯೋಗ ಮಾಡುತ್ತೇನೆ, ಅಗ್ನಿಹೋತ್ರ ಮಾಡುತ್ತೇನೆ. ಆದರೂ ನನಗೆ ಹೃದಯಾಘಾತವಾಗಿರೋದು ಆಶ್ಚರ್ಯ ತಂದಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೀದ್ದೇನೆ. ಸ್ವಲ್ಪ ದಿನದ ಮಟ್ಟಿಗೆ ಮಾಂಸಹಾರ ತ್ಯಜಿಸಿ ಸಸ್ಯಹಾರ ಸೇವಿಸಿ. ಜೊತೆಗೆ ಅಗ್ನಿಹೋತ್ರ ಮಾಡಿದರೆ ವೈರಸ್ನಿಂದ ದೂರ ಇರಬಹುದು ಎಂದರು.