ಕರ್ನಾಟಕ

karnataka

ETV Bharat / state

ನಂಜನಗೂಡಿನ ಪೋಲಿಸ್ ಠಾಣೆ, ಡಿವೈಎಸ್ಪಿ ಕಚೇರಿ ಸೀಲ್ ಡೌನ್.. - Nanjangud Rural Police Station

ನಂಜನಗೂಡಿನ ಗ್ರಾಮಾಂತರ ಪೋಲಿಸ್ ಠಾಣೆಯ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆ ತಹಶಿಲ್ದಾರ್ ಆದೇಶದ ಮೇರೆಗೆ ಪೊಲೀಸ್​ ಠಾಣೆ ಹಾಗೂ ಡಿವೈಎಸ್​ಪಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

Seal Down of Nanjanagudu Police Station and DYSP Office..
ನಂಜನಗೂಡಿನ ಪೋಲಿಸ್ ಠಾಣೆ, ಡಿವೈಎಸ್ಪಿ ಕಚೇರಿ ಸೀಲ್ ಡೌನ್..

By

Published : Jun 22, 2020, 6:49 PM IST

ಮೈಸೂರು: ನಂಜನಗೂಡಿನ ಗ್ರಾಮಾಂತರ ಪೋಲಿಸ್ ಠಾಣೆಯ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆ ತಹಶಿಲ್ದಾರ್ ಆದೇಶದ ಮೇರೆಗೆ ಪೊಲೀಸ್​ ಠಾಣೆ ಹಾಗೂ ಡಿವೈಎಸ್​ಪಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ನಂಜನಗೂಡಿನ ಪೋಲಿಸ್ ಠಾಣೆ ಮತ್ತು ಡಿವೈಎಸ್ಪಿ ಕಚೇರಿ ಸೀಲ್ ಡೌನ್..

ನಂಜನಗೂಡಿನ ಗ್ರಾಮಾಂತರ ಠಾಣೆಯ 4 ಜನ ಪೊಲೀಸರಿಗೆ ಕೊರೊನಾ ಸೋಂಕು ದೃಢವಾದ ಹಿನ್ನಲೆ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನೂ ಸೋಂಕಿತರನ್ನು ಪೊಲೀಸ್ ಠಾಣೆಯ ಹಿಂಬದಿಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ತಾತ್ಕಾಲಿಕವಾಗಿ ಪೊಲೀಸ್ ಠಾಣೆಯನ್ನು ಪಟ್ಟಣ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದ್ದು, ಸೀಲ್ ಡೌನ್ ಆಗಿರುವ ಎರಡು ಠಾಣೆಗಳನ್ನು ಸ್ಯಾನಿಟೈಸ್​ ಮಾಡಲಾಗಿದೆ.

ಕೊರೊನಾ ವಿರುದ್ಧ ಹೋರಾಡುವ ವಾರಿಯರ್ಸ್​ ಗೆ ಸೋಂಕು ತಗುಲಿರುವ ಹಿನ್ನಲೆ ಅವರ ಕುಟುಂಬದವರು ಹಾಗೂ ತಾಲೂಕಿನ ಜನತೆ ಕೂಡ ಮತ್ತೆ ಆತಂಕಕ್ಕೀಡಾಗಿದ್ದಾರೆ.

ABOUT THE AUTHOR

...view details