ಸಿರಿಧಾನ್ಯ ಮಹತ್ವದ ಕುರಿತು ವಿಜ್ಞಾನಿ ಡಾ.ಸುರೇಶ ಡಿ ಸಕರೇ ಸಂದರ್ಶನ ಮೈಸೂರು: ಆಧುನಿಕ ಯುಗದಲ್ಲಿ ಸಿರಿಧಾನ್ಯದ ಮಹತ್ವ ಹೆಚ್ಚಾಗಿದೆ. ಹೀಗಾಗಿ ಸಿರಿಧಾನ್ಯಗಳು ಒಳ್ಳೆಯ ಆಹಾರ ಎಂದು ಸಿಎಫ್ಟಿಆರ್ಐನಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಹಲವು ಸಿರಿಧಾನ್ಯಗಳ ಮೇಲೆ ಸಂಶೋದನೆ ನಡೆಸಿರುವ ಡಾ.ಸುರೇಶ ಡಿ ಸಕರೇ ಅವರು 'ಈಟಿವಿ ಭಾರತ'ಕ್ಕೆ ನೀಡಿದ ಸಂದರ್ಶನದಲ್ಲಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ತಿಳಿಸಿದರು.
ಮೈಸೂರು ನಗರದ ಸಿಎಫ್ಟಿಆರ್ಐ ಆವರಣದಲ್ಲಿ ನಡೆಯುತ್ತಿರುವ 9ನೇ ಅಂತರರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ಸಿರಿಧಾನ್ಯ ಮಹತ್ವದ ಕುರಿತು ತಿಳಿಸಲು ಸಿರಿಧಾನ್ಯ ಐಲ್ಯಾಂಡ್ ಎಂಬ ಪ್ರತ್ಯೇಕ ಪ್ರದರ್ಶನ ಏರ್ಪಡಿಸಿದೆ. ಇಲ್ಲಿ ಸಿರಿಧಾನ್ಯಗಳಿಂದ ಅಭಿವೃದ್ಧಿಪಡಿಸಿರುವ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. 300ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, ಸಿಎಫ್ಟಿಆರ್ಐ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಲವಾರು ಖಾಸಗಿ ಕಂಪನಿಗಳೂ ಸಹ ಸಮ್ಮೇಳನದಲ್ಲಿ ಭಾಗವಹಿಸಿವೆ.
ಸಿರಿಧಾನ್ಯದ ಮಹತ್ವ, ಹೊಸ ವಸ್ತುಗಳ ಸಂಶೋಧನೆ ಬಗ್ಗೆ ಮಾಹಿತಿ ವಿನಿಮಯ ಜೊತೆಗೆ ಜನರಿಗೆ ವಿಚಾರ ತಿಳಿಸುವ ನಿಟ್ಟಿನಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ. 70ಕ್ಕೂ ಹೆಚ್ಚು ಸಿರಿಧಾನ್ಯದ ಮೂಲಕ ಪ್ರಾಡಕ್ಟ್ಗಳನ್ನು ತಯಾರು ಮಾಡುವ ಖಾಸಗಿ ಕಂಪನಿಗಳು ಹಾಗೂ ಸರ್ಕಾರಿ ಸಂಸ್ಥೆಗಳಾದ ಸಿಎಫ್ಟಿಆರ್ಐ, ಸಿಎಸ್ಐಆರ್, ಡಿಎಫ್ಆರ್ಎಲ್, ಹಾಗೂ ಡಿಆರ್ಡಿಓ ಭಾಗವಹಿಸಿವೆ ಎಂದು ಡಾ.ಸುರೇಶ ಡಿ ಸಕರೇ ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ವಸ್ತುಗಳಿಂದ ತಯಾರು ಮಾಡುವ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಇವು ಆರೋಗ್ಯಕ್ಕೆ ಉತ್ತಮವಾಗಿವೆ. ಸಿರಿಧಾನ್ಯ ಪದಾರ್ಥಗಳಿಂದ ತಯಾರು ಮಾಡುವ ಆಹಾರ ಪದಾರ್ಥಗಳು ಹೆಚ್ಚಿನ ಪೌಷ್ಟಿಕಾಂಶ, ರೋಗನಿರೋಧಕ ಶಕ್ತಿ ಒಳಗೊಂಡಿರುತ್ತದೆ. ಆದರೆ ಸಿರಿಧಾನ್ಯ ವಸ್ತುಗಳನ್ನು ತಯಾರು ಮಾಡುವಾಗ ವಹಿಸುವ ಮುನ್ನೆಚ್ಚರಿಕೆ ಕುರಿತು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಬಗ್ಗೆ ವಸ್ತು ಪ್ರದರ್ಶನದಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಸುರೇಶ ಡಿ ಸಕರೇ ವಿವರಿಸಿದರು.
ಇದನ್ನೂ ಓದಿ:ನಾಳೆಯಿಂದ 4 ದಿನ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನ