ಕರ್ನಾಟಕ

karnataka

ETV Bharat / state

ಸರಗೂರು ಪಟ್ಟಣ ಪಂಚಾಯತ್​​ ಚುನಾವಣೆ ಫಲಿತಾಂಶ ಅತಂತ್ರ..

ಸ್ಥಳೀಯ ಕಾಂಗ್ರೆಸ್ ಶಾಸಕ ಅನಿಲ್‌ ಚಿಕ್ಕಮಾದು ಅವರಿಗೆ ಈ ಚುನಾವಣೆ ಫಲಿತಾಂಶ ಮುಖಭಂಗ ಉಂಟುಮಾಡಿದೆ. ಬಿಜೆಪಿ ಇಲ್ಲಿ ಅನಿರೀಕ್ಷಿತ ಫಲಿತಾಂಶ ಪಡೆಯುವ ಮೂಲಕ ಅತೀ ಹೆಚ್ಚು ಸ್ಥಾನ ಗೆದ್ದಿದೆ..

Saraguru pattana panchayat election result came out
ಸರಗೂರು ಪಟ್ಟಣ ಪಂಚಾಯತ್​​ ಚುನಾವಣೆ ಫಲಿತಾಂಶ ಅತಂತ್ರ

By

Published : Mar 31, 2021, 4:27 PM IST

ಮೈಸೂರು: ಸರಗೂರು ಪಟ್ಟಣ ಪಂಚಾಯತ್​​ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಯಾವ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಸರಗೂರು ಪಟ್ಟಣ ಪಂಚಾಯತ್​ನ 12 ವಾರ್ಡ್​​ಗಳಿಗೆ ಕಳೆದ ಸೋಮವಾರ ಮತದಾನ ನಡೆದಿತ್ತು. ಇಂದು ಬೆಳಗ್ಗೆ ಮತ ಎಣಿಕೆ ಕಾರ್ಯ ನಡೆದಿದೆ. 12ರೊಳಗೆ 6 ಸ್ಥಾನ ಬಿಜೆಪಿ, 3 ಸ್ಥಾನ ಜೆಡಿಎಸ್, 2 ಸ್ಥಾನಗಳನ್ನು ಕಾಂಗ್ರೆಸ್, 1 ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ಗೆಲ್ಲುವ ಮೂಲಕ ಯಾವುದೇ ಪಕ್ಷಕ್ಕೂ ಬಹುಮತ ಬಂದಿಲ್ಲ.

ಇದನ್ನೂ ಓದಿ:ಮೈಸೂರು ಜಿಲ್ಲೆಯಲ್ಲಿವೆ 11 ಅಗ್ನಿಶಾಮಕ ಠಾಣೆಗಳು

ಹೆಚ್‌ ಡಿ ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್‌ ಚಿಕ್ಕಮಾದು ಅವರಿಗೆ ಈ ಚುನಾವಣೆ ಫಲಿತಾಂಶ ಮುಖಭಂಗ ಉಂಟುಮಾಡಿದೆ. ಬಿಜೆಪಿ ಇಲ್ಲಿ ಅನಿರೀಕ್ಷಿತ ಫಲಿತಾಂಶ ಪಡೆಯುವ ಮೂಲಕ ಅತೀ ಹೆಚ್ಚು ಸ್ಥಾನ ಗೆದ್ದಿದೆ. ಪಕ್ಷೇತರರ ಬೆಂಬಲ ಅಥವಾ ಜಿಡಿಎಸ್ ಬೆಂಬಲದಿಂದ ಬಿಜೆಪಿ ಪಟ್ಟಣ ಪಂಚಾಯತ್​​ನ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

ABOUT THE AUTHOR

...view details