ಮೈಸೂರು:ಹೆಚ್.ವಿಶ್ವನಾಥ್ ಅವರನ್ನ ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ಯಾವ ಆಸೆಯಿಂದ ಅವರು ನಮ್ಮ ಪಕ್ಷ ತೊರೆದರೊ ಆ, ಆಸೆ ಈಡೇರಲಿಲ್ಲ. ಪಾಪ ಇಂತಾ ವಯಸ್ಸಿನಲ್ಲಿ ಹೀಗಾಗಬಾರದಿತ್ತು ಎಂದು ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದ್ದಾರೆ.
ವಿಶ್ವನಾಥ್‌ರನ್ನ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ: ಸಾರಾ ಮಹೇಶ್ ವ್ಯಂಗ್ಯ - ಸಾರಾ ಮಹೇಶ್ ಲೇಟೆಸ್ಟ್ ನ್ಯೂಸ್
ಹೆಚ್ ವಿಶ್ವನಾಥ್ ಯಾವ ಆಸೆಯಿಂದ ನಮ್ಮ ಪಕ್ಷ ತೊರೆದರೊ ಆ, ಆಸೆ ಈಡೇರಲಿಲ್ಲ ಎಂದು ಶಾಸಕ ಸಾರಾ ಮಹೇಶ್ ಕಿಚಾಯಿಸಿದ್ದಾರೆ.
ಸಾರಾ ಮಹೇಶ್
ಎಂಎಲ್‌ಸಿ ವಿಶ್ವನಾಥ್, ಮಂತ್ರಿ ಸ್ಥಾನಕ್ಕೆ ಅನರ್ಹ ಎಂಬ ತೀರ್ಪಿನ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಾರಾ ಮಹೇಶ್, ನಾನು ಅಂದೇ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನ ಉಲ್ಲಂಘಿಸಿದ್ದಾರೆ ಅಂತ ಹೇಳಿದ್ದೆ. ಅದರಂತೆ ಹೈಕೋರ್ಟ್, ಸುಪ್ರಿಂ ತೀರ್ಪನ್ನ ಎತ್ತಿ ಹಿಡಿದಿದೆ ಎಂದಿದ್ದಾರೆ.
ನಾನು ಎಂಎಲ್‌ಸಿ ಹುದ್ದೆ ರದ್ದು ಮಾಡಿ ಅಂತ ಹೇಳಲ್ಲ, ಅವರು ಸಚಿವರಾಗಬೇಕಿತ್ತು. ಆಗಿದ್ದರೆ ಜಿಲ್ಲೆಗೆ ಅನುದಾನ ಬರುತ್ತಿತ್ತು ಎಂದು ಲೇವಡಿ ಮಾಡಿದ್ದಾರೆ.