ಕರ್ನಾಟಕ

karnataka

ETV Bharat / state

ಸುಮಲತಾರ ಬಗ್ಗೆ ಮಾತನಾಡಬೇಡಿ ಎಂದು ಕುಮಾರಣ್ಣರಿಗೆ ಕೈ ಮುಗಿಯುವೆ : ಸಾರಾ‌ ಮಹೇಶ್ - ಕುಮಾರಸ್ವಾಮಿಗೆ ಮನವಿ ಮಾಡಿದ ಸಾರಾ‌ ಮಹೇಶ್

ಕೆಆರ್​​ಎಸ್​​ ಬಿರುಕು ಬಿಟ್ಟಿದೆ ಎಂಬ ವಿಚಾರವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ವಾಕ್ಸಮರದ ಬಗ್ಗೆ ಕೆ.ಆರ್​​ ನಗರ ಶಾಸಕ ಸಾ.ರಾ. ಮಹೇಶ್​ ಪ್ರತಿಕ್ರಿಯಿಸಿದ್ದಾರೆ.

Sara Mahesh
ಸಾರಾ‌ ಮಹೇಶ್

By

Published : Jul 9, 2021, 3:45 PM IST

ಮೈಸೂರು:ಸಂಸದೆ ಸುಮಲತಾ ಅಂಬರೀಶ್​​ ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಮಗಾಗಲಿ, ನಮ್ಮ ಪಕ್ಷದವರಿಗಾಗಲಿ ಇಲ್ಲ ಎಂದು ಸಾರಾ ಮಹೇಶ್ ಹೇಳಿದರು.

ಕೆಆರ್​​ ನಗರ ಶಾಸಕ ಸಾ.ರಾ. ಮಹೇಶ್​ ಹೇಳಿಕೆ

ಜಿಲ್ಲಾ ಪಂಚಾಯಿತಿ ಸಭಾಂಗಣ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಅಂಬರೀಶ್ ಅಣ್ಣನವರ ಧರ್ಮಪತ್ನಿ, ನಮ್ಮ ಕ್ಷೇತ್ರದ ಸಂಸದೆ. ಕೋವಿಡ್ ಆರಂಭವಾದ ನಂತರ ನನ್ನ ಕ್ಷೇತ್ರವು ಸೇರಿ ಎಲ್ಲಾ ಗ್ರಾಮಕ್ಕೂ ಭೇಟಿ ಕೊಟ್ಟು ಕೆಲಸ ಮಾಡುವ ಮೂಲಕ ಅವರು ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ಅವರ ಅವರ ಬಗ್ಗೆ ಮಾತನಾಡಬೇಡಿ ಎಂದು ಕುಮಾರಣ್ಣನಲ್ಲಿ ಮನವಿ ಮಾಡಿದ್ದೇನೆ ಎಂದರು.

ಕೆಆರ್​ಎಸ್​​ ಬಿರುಕು ಬಿಟ್ಟಿದೆ ಎಂದು ಮಾಹಿತಿ ನೀಡಿದಾಗ ಸುಮಾಲತಾ ಅವರು ಒಮ್ಮೆ ಹೋಗಿ ಅದನ್ನು ಪರಶೀಲನೆ ಮಾಡಬೇಕಿತ್ತು. ಯಾರದ್ದೋ ಮಾತು ಕೇಳಿ ಮಾತನಾಡಿದ್ದಾರೆ. ಕನ್ನಂಬಾಡಿ ಕೇವಲ ಕಟ್ಟೆ ಅಲ್ಲ, ಅದು ಮೈಸೂರು, ಮಂಡ್ಯ ಜಿಲ್ಲೆ ದಿನನಿತ್ಯದ ಜೀವನಾಡಿ ಎಂದರು.

ಇದನ್ನೂಓದಿ: ಕೆಆರ್​ಎಸ್ ಬಿರುಕಿನ ವಿಚಾರವಾಗಿ ರಂಪಾಟ ನಡೆಯುತ್ತಿದೆ, ಈ ಸರ್ಕಾರ ಸತ್ಹೋಗಿದೆಯಾ?: ಹೆಚ್.ವಿಶ್ವನಾಥ್

ABOUT THE AUTHOR

...view details