ಕರ್ನಾಟಕ

karnataka

ETV Bharat / state

ಮೈಮುಲ್ ಚುನಾವಣೆ.. ಸ್ವಪಕ್ಷದ ಶಾಸಕ ಜಿಟಿಡಿ ವಿರುದ್ಧ ಸಾ ರಾ ಮಹೇಶ್ ವಾಗ್ದಾಳಿ

ಮೈಸೂರಿನ ಹೈಕಮಾಂಡ್, ಶಕುನಿ, ಮಂಥರೆ ಮಾತು ಕೇಳಿ ಕುಮಾರಸ್ವಾಮಿ ಹಾಳಾದರು ಎಂದು ನನ್ನ ವಿರುದ್ದ ಜಿ ಟಿ ದೇವೇಗೌಡ ಹೇಳಿದ್ದಾರೆ. ಶಕುನಿ ಇಲ್ಲದೆ ಮಹಾಭಾರತ ನಡೆಯುತ್ತಿರಲಿಲ್ಲ. ಧರ್ಮರಾಜ್ಯದ ಸ್ಥಾಪನೆ ಆಗುತ್ತಿರಲಿಲ್ಲ. ಮಂಥರೆ ಇಲ್ಲ ಅಂದರೆ ರಾಮಾಯಣ ನಡೆಯುತ್ತಿರಲಿಲ್ಲ..

sara mahesh outrage against g t devegowda
ಮೈಮುಲ್ ಚುನಾವಣೆ: ಜಿಟಿಡಿ ವಿರುದ್ಧ ಸಾರಾ ವಾಗ್ದಾಳಿ

By

Published : Mar 17, 2021, 3:38 PM IST

ಮೈಸೂರು: ಮೈಮುಲ್ ಚುನಾವಣೆಯ ಸೋಲು-ಗೆಲುವನ್ನು ಸ್ವಾಗತಿಸುತ್ತೇನೆ. ಮೊದಲ‌ ಬಾರಿಗೆ ನಮ್ಮ ಶಕ್ತಿ ತೋರಿಸಿದ್ದೇವೆ ಎಂದು ಶಾಸಕ ಸಾ ರಾ ಮಹೇಶ್ ಅವರು ಶಾಸಕ ಜಿ ಟಿ ದೇವೇಗೌಡ ಅವರ ಹೆಸರನ್ನು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದರು.

ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿಯವರು ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರಸಬಾರದು ಎಂದು ಹೇಳಿದ್ದರು. ಆದರೆ, ಜಿ ಟಿ ದೇವೇಗೌಡ ಪಕ್ಷಗಳನ್ನು ಬಳಸಿಕೊಂಡು ಚುನಾವಣೆ ನಡೆಸಿದ್ದಾರೆ. ಇಂತಹ ವ್ಯಕ್ತಿಗಳು ಮೈಸೂರು ಜಿಲ್ಲೆಯಲ್ಲಿ‌ ಜನತಾದಳವನ್ನು ನಿರ್ನಾಮ ಮಾಡುತ್ತಿದ್ದಾರೆ.

ಇವರಿಂದ ಪಕ್ಷ ಉಳಿಸಲು ನಾವೀಗ ಶ್ರಮಿಸಬೇಕಾಗಿದೆ. ಇವರು ಆಲದ ಮರ ಬೇರು ಬಿಟ್ಟ ಕಡೆ ಬೇರೆ ಗೀಡ ಬೆಳೆಯಲು ಬಿಡುವುದಿಲ್ಲ, ಇಂತವರಿಂದ ಪಕ್ಷಕ್ಕೆ ಯಾವುದೇ ಅನುಕೂಲ ಇಲ್ಲ ಎಂದು ವಾಗ್ದಾಳಿ‌ ನಡೆಸಿದರು.

ಶಾಸಕ ಸಾ.ರಾ. ಮಹೇಶ್

ಮೈಸೂರಿನ ಹೈಕಮಾಂಡ್, ಶಕುನಿ, ಮಂಥರೆ ಮಾತು ಕೇಳಿ ಕುಮಾರಸ್ವಾಮಿ ಹಾಳಾದರು ಎಂದು ನನ್ನ ವಿರುದ್ದ ಜಿ ಟಿ ದೇವೇಗೌಡ ಹೇಳಿದ್ದಾರೆ. ಶಕುನಿ ಇಲ್ಲದೆ ಮಹಾಭಾರತ ನಡೆಯುತ್ತಿರಲಿಲ್ಲ. ಧರ್ಮರಾಜ್ಯದ ಸ್ಥಾಪನೆ ಆಗುತ್ತಿರಲಿಲ್ಲ. ಮಂಥರೆ ಇಲ್ಲ ಅಂದರೆ ರಾಮಾಯಣ ನಡೆಯುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಹೆಚ್​​ಡಿಕೆಗೆ ಸೆಡ್ಡು ಹೊಡೆದ ದೇವೇಗೌಡ: ಸಾರಾಗೆ ಟಕ್ಕರ್​​ ನೀಡಿ ಸಹಕಾರಿ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದ ಜಿಟಿಡಿ

ಜಿಲ್ಲೆಯಲ್ಲಿ ಬೇರೆ-ಬೇರೆ ಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜೆಡಿಎಸ್ ಪಕ್ಷವನ್ನು ಸರ್ವನಾಶ ಮಾಡಲು‌ ಜಿಟಿಡಿ ಹೊರಟಿದ್ದಾರೆ ಎಂದು ಕಿಡಿಕಾರಿದರು. ಜೊತೆಗೆ ನೀವೇ ನಾಯಕತ್ವವಹಿಸಿಕೊಳ್ಳಿ ಎಂದು ಜಿಟಿಡಿಯನ್ನು ಆಹ್ವಾನಿಸಿದ ಸಾರಾ, ನಾನು ಯಾವತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಹಾಗೇನಾದರೂ ನಾನು ನಡೆದುಕೊಂಡಿದ್ದು ಸಾಬಿತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ‌ ಎಂದರು.

ಸಾ ರಾ ಮಹೇಶ್​ ಭಾವುಕ :ಕುಮಾರಸ್ವಾಮಿ ಬಣದೊಂದಿಗೆ ಗುರುತಿಸಿಕೊಂಡಿದ್ದ ಹೆಚ್ ಡಿ ರೇವಣ್ಣ ಅವರ ಬಾವ ಎಸ್ ಕೆ ಮಧುಚಂದ್ರ ಸೋಲನ್ನನುಭವಿಸಿದ ಹಿನ್ನೆಲೆ ಸಾ ರಾ ಮಹೇಶ್​ ಭಾವುಕರಾಗಿ ಮತ ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದರು.

ABOUT THE AUTHOR

...view details