ಮೈಸೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ತೆರೆ ಮೇಲೆ ತರಲು ಸದ್ದಿಲ್ಲದೇ ಟೈಟಲ್ ಗಾಗಿ ರಿಜಿಸ್ಟ್ರೇಷನ್ ಕಸರತ್ತು ಶುರುವಾಗಿದೆ.
'ಸಿಡಿ ಲೇಡಿ' ಸಿನಿಮಾಗಾಗಿ ಟೈಟಲ್ ಅನ್ನು ನಿರ್ಮಾಪಕ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ನೋಂದಣಿ ಮಾಡಿಸಿದ್ದಾರೆ ಎನ್ನಲಾಗಿದೆ. 'ಸಿಡಿ ಲೇಡಿ' ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ, ಕಥೆ ಚಿತ್ರಕಥೆ ಇನ್ನೂ ಸಿದ್ದವಾಗಿಲ್ಲ. ಸಿಡಿ ಕೇಸ್‌ನಲ್ಲಿ ನಡೆದಿರುವಂತೆ ಅಶ್ಲೀಲವಾಗಿ ಸಿನಿಮಾ ತೋರಿಸಲ್ಲ. ನಾನು ಕಾದಂಬರಿ ಆಧಾರಿತ ಚಿತ್ರಗಳನ್ನ ಕೊಟ್ಟವನು ಎಂದಿದ್ದಾರೆ ಸಂದೇಶ್ ನಾಗರಾಜ್.