ಕರ್ನಾಟಕ

karnataka

ETV Bharat / state

ಎರಡು ಐಷಾರಾಮಿ ಬಸ್​ಗಳಿಗೆ ನಿನ್ನೆ ಒಂದೇ ನಂಬರ್​ ಪ್ಲೇಟ್... ಇವತ್ತು ಅದರಲ್ಲಿ ಒಂದ್​ ಮಿಸ್​! - ಎರಡು ಬಸ್​ಗೆ ಒಂದೇ ನಂಬರ್​ ಪ್ರಕರಣ,

ಎರಡು ಐಷಾರಾಮಿ ಬಸ್​ಗಳಿಗೆ ಒಂದೇ ನಂಬರ್​ ಪ್ಲೇಟ್​ ಪ್ರಕರಣ ಹೊಸ ತಿರುವು ಪಡೆದಿದ್ದು, ಬಸ್​ವೊಂದರ ನಂಬರ್​ ಪ್ಲೇಟ್​ ಈಗ ಮಾಯವಾಗಿದೆ.

bus number plate miss, bus number plate miss in Police station, bus number plate miss in Mysore Police station, Same bus number case, Same bus number case news, ಬಸ್​ ನಂಬರ್​ ಪ್ಲೇಟ್​ ನಾಪತ್ತೆ, ಪೊಲೀಸ್​ ಠಾಣೆಯಲ್ಲಿ ಬಸ್​ ನಂಬರ್​ ಪ್ಲೇಟ್​ ನಾಪತ್ತೆ, ಮೈಸೂರು ಪೊಲೀಸ್​ ಠಾಣೆಯಲ್ಲಿ ಬಸ್​ ನಂಬರ್​ ಪ್ಲೇಟ್​ ನಾಪತ್ತೆ, ಎರಡು ಬಸ್​ಗೆ ಒಂದೇ ನಂಬರ್​ ಪ್ರಕರಣ, ಎರಡು ಬಸ್​ಗೆ ಒಂದೇ ನಂಬರ್​ ಪ್ರಕರಣ ಸುದ್ದಿ,
ಎರಡು ಐಷಾರಾಮಿ ಬಸ್​ಗಳಿಗೆ ಒಂದೇ ನಂಬರ್​ ಪ್ಲೇಟ್

By

Published : Aug 27, 2020, 4:00 PM IST

ಮೈಸೂರು:ಒಂದೇ ನೋಂದಣಿ ಸಂಖ್ಯೆಯ ಎರಡು ಐಷಾರಾಮಿ ಬಸ್​ಗಳ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಪೊಲೀಸ್​​ ಠಾಣಾ ಆವರಣದಲ್ಲಿ ನಿಂತಿದ್ದ ಒಂದು ಬಸ್​ನ ನಂಬರ್ ಪ್ಲೇಟ್ ರಾತ್ರೋರಾತ್ರಿ ಕಾಣೆಯಾಗಿದೆ.

ಎರಡು ಐಷಾರಾಮಿ ಬಸ್​ಗಳಿಗೆ ಒಂದೇ ನಂಬರ್​ ಪ್ಲೇಟ್

ಮೈಸೂರು ಮತ್ತು ನಂಜನಗೂಡಿನಲ್ಲಿ ಕೆಎ 11 ಬಿ 2969 ನೋಂದಣಿ ಸಂಖ್ಯೆ ಹೊಂದಿದ್ದ ಕಾಮಧೇನು ಎಂಬ ಎರಡು ಬಸ್​ಗಳು ಒಂದೇ ನೋಂದಣಿ ಸಂಖ್ಯೆ ಹಾಕಿಕೊಂಡು ಸಂಚರಿಸುತ್ತಿದ್ದವು.

ಈ ಬಗ್ಗೆ ಅನುಮಾನಗೊಂಡ ಪೊಲೀಸರು ದಾಖಲಾತಿಗಳನ್ನು ಪರಿಶೀಲಿಸಿದಾಗ ಒಂದು ಬಸ್ ನಂಜನಗೂಡಿನಲ್ಲಿ ಮತ್ತೊಂದು ಬಸ್ ಮೈಸೂರಿನಲ್ಲಿ ವಶಕ್ಕೆ ಪಡೆದು ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದರು. ಆದರೆ, ಠಾಣೆಯ ಆವರಣದಲ್ಲಿದ್ದ ಈ ಎರಡು ಬಸ್​ಗಳಲ್ಲಿ ಒಂದು ಬಸ್​ ನಂಬರ್ ಪ್ಲೇಟ್ ಬೆಳಗಾಗುವುದರೊಳಗಾಗಿ ಕಾಣೆಯಾಗಿದೆ. ಈಗ ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿದ್ದು, ವಿಚಾರಣೆ ಕೈಗೊಂಡಿದ್ದಾರೆ.

ಆರ್​ಟಿಒ ಅಧಿಕಾರಿಗಳಿಂದಲೂ ತನಿಖೆ

ನಂಜನಗೂಡಿನ ಪೊಲೀಸರು ಒಂದೇ ನೋಂದಣಿ ಸಂಖ್ಯೆಯ ಎರಡು ಬಸ್​ಗಳನ್ನು ವಶಕ್ಕೆ ಪಡೆದಿರುವುದು ಮೈಸೂರು ಸಾರಿಗೆ ಇಲಾಖೆಯ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರು ಒಂದು ಕಡೆ ತನಿಖೆ ನಡೆಸಿದರೆ, ಮತ್ತೊಂದು ಕಡೆ ಆರ್​ಟಿಒ ಕಚೇರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ನಂಜನಗೂಡಿನ ಪೊಲೀಸರು ವರದಿ ನೀಡಿದ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮೈಸೂರು ಪ್ರಾದೇಶಿಕ ಆಯುಕ್ತರಾದ ಮೂರ್ತಿ ಈಟಿವಿ ಭಾರತಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ನಂಬರ್ ನಾಪತ್ತೆ ಪ್ರಕರಣವನ್ನು ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದರು.

ABOUT THE AUTHOR

...view details