ಮೈಸೂರು:ಅದೃಷ್ಟದ ಹಾವೆಂದು ಮಣ್ಣಿನ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ವಿಚಕ್ಷಣ ದಳದವರು ಬಂಧಿಸಿದ್ದಾರೆ.
ಮಣ್ಣಿನ ಹಾವಿನ ಅಕ್ರಮ ಮಾರಾಟ ಯತ್ನ: ನಾಲ್ವರ ಬಂಧನ - clay snake News
ಮಣ್ಣನ್ನು ತಿಂದು ಬದುಕುವ ಜೀವಂತ ಹಾವನ್ನು ಹಿಡಿದು ಇದೊಂದು ಅದೃಷ್ಟದ ಹಾವು ಎಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಮಣ್ಣಿನ ಹಾವು
ಮಂಜುನಾಥ್, ವೇಣುಗೋಪಾಲ್, ಶೃಂಗಾರ್ ಹಾಗೂ ಸಿದ್ದರಾಜು ಬಂಧಿತರು. ಇವರನ್ನು ಮೈಸೂರು ಅರಣ್ಯ ವಿಚಕ್ಷಣ ದಳದ ಸಿಬ್ಬಂದಿ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಿಂದ ಬೈಕ್ ವಶಕ್ಕೆ ಪಡೆದು, ಮಣ್ಣು ತಿಂದು ಬದುಕುವ ಮಣ್ಣಿನ ಹಾವನ್ನು ರಕ್ಷಣೆ ಮಾಡಲಾಗಿದೆ.