ಮೈಸೂರು:ಲಾಕ್ಡೌನ್ ನಂತರ ಹೇಳದೆ ಕೇಳದೆ ಕಾರ್ಮಿಕರ ಸಂಬಳವನ್ನು ಕಡಿತಗೊಳಿಸಿದ್ದನ್ನು ವಿರೋಧಿಸಿ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿರುವ ಘಟನೆ ನಂಜನಗೂಡಿನ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ನಡೆದಿದೆ.
ಸಂಬಳ ಕಡಿತಕ್ಕೆ ಕಾರ್ಮಿಕರ ವಿರೋಧ ... ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರು - ನಂಜನಗೂಡಯ ಕೈಗಾರಿಕಾ ಪ್ರದೇಶ
ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಎಟಿ ಆ್ಯಂಡ್ ಎಸ್ ಕಾರ್ಖಾನೆಯಲ್ಲಿ 1,000 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಾಲೀಕರು ಲಾಕ್ಡೌನ್ನ ನಂತರ ಕಾರ್ಖಾನೆಯನ್ನು ಪುನಾರಂಭಿಸಿ ವೇತನದಲ್ಲಿ 40 ರಷ್ಟು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.
ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಎಟಿ ಆ್ಯಂಡ್ ಎಸ್ ಕಾರ್ಖಾನೆಯಲ್ಲಿ 1,000 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕಾರ್ಖಾನೆಯ ಮಾಲೀಕರು ಲಾಕ್ಡೌನ್ನ ನಂತರ ಕಾರ್ಖಾನೆಯನ್ನು ಪುನಾರಂಭಿಸಿದ್ದಾರೆ. ಆದ್ರೆ ವೇತನದಲ್ಲಿ ಶೇ.40 ರಷ್ಟು ಕಡಿತಗೊಳಿಸಿದ್ದರ ಪರಿಣಾಮ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಕಾನೂನು ಸಲಹೆಗಾರ ಶೇಷಾದ್ರಿ, ಇಂದು ಕಾರ್ಖಾನೆಯಲ್ಲಿ ಡಿ.ಎಲ್.ಸಿ ಸಭೆ ಇರುವುದರಿಂದ ಕಾರ್ಮಿಕರ ಸಂಬಳ ಹಾಗೂ ಇನ್ನಿತರ ಸೌಲಭ್ಯ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ. ಒಂದು ವೇಳೆ ಪೂರ್ತಿ ಸಂಬಳ ನೀಡದಿದ್ದರೆ ಕಾನೂನು ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದರು.