ಮೈಸೂರು:ಕೋವಿಡ್-19(ಕೊರೊನಾ ವೈರಸ್) ಹಿನ್ನೆಲೆ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಸಫಾರಿ ಕೇಂದ್ರಗಳನ್ನು ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆ ಇಂದಿನಿಂದ ಮಾ. 23ರವರೆಗೆ ರದ್ದು ಮಾಡಲಾಗಿದೆ.
ಕೊರೊನಾ ಭೀತಿ ಹಿನ್ನೆಲೆ ನಾಗರಹೊಳೆ ಸಫಾರಿ ರದ್ದು: ಪ್ರವಾಸಿಗರಿಗೆ ನಿರಾಸೆ
ಕೋವಿಡ್-19 ವೈರಸ್ ಹಿನ್ನೆಲೆ ನಾಗರಹೊಳೆಯಲ್ಲಿ ಸಫಾರಿಯನ್ನು ಮಾ. 16ರಿಂದ ಮಾ. 23ರವರೆಗೆ ರದ್ದು ಮಾಡಲಾಗಿದೆ.
ಒಂದೆಡೆ ಪ್ರವಾಸಿಗರಿಲ್ಲದೇ ಸಫಾರಿ ಕೇಂದ್ರಗಳು ಭಣಗುಡುತ್ತಿದ್ದರೆ, ಮತ್ತೊಂದೆಡೆ ಇಂದು ಸಫಾರಿಗೆ ಎಂದು ಖುಷಿಯಲ್ಲಿ ಬಂದಿದ್ದ ಪ್ರವಾಸಿಗರು ಸಫಾರಿ ಇಲ್ಲದೇ ಬೇಸರದಿಂದ ಹೊರ ನಡೆದರು. ರಾಜೀವ್ ಗಾಂಧಿ(ನಾಗರಹೊಳೆ) ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಕಾಕನಕೋಟೆ ಹಾಗೂ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಸೇರಿದಂತೆ ಎರಡು ಸಫಾರಿ ಕೇಂದ್ರಗಳಿದ್ದು, ಪ್ರತಿನಿತ್ಯವೂ 150ಕ್ಕೂ ಹೆಚ್ಚು ಮಂದಿ ಸಫಾರಿಗೆ ಆಗಮಿಸುತ್ತಿದ್ದರು.
ಸರ್ಕಾರದ ಆದೇಶದಂತೆ ಒಂದು ವಾರ ಕಾಲ ಸಫಾರಿ ಕೇಂದ್ರ ಹಾಗೂ ವಸತಿ ಗೃಹಗಳು ಬಂದ್ ಮಾಡಿರುವುದರಿಂದ ಸಫಾರಿ ಪ್ರಿಯರಿಗೆ ಬೇಸರವಾದರೆ, ಸಫಾರಿ ಕೇಂದ್ರಗಳಿಗೆ ದಿನಕ್ಕೆ ಲಕ್ಷಾಂತರ ರೂ. ನಷ್ಟವಾಗತೊಡಗಿದೆ. ಭಾರತೀಯ ಪ್ರಜೆಗಳಿಗೆ ಒಬ್ಬರಿಗೆ 500 ರೂ., ಮಕ್ಕಳಿಗೆ 250 ಹಾಗೂ ವಿದೇಶಿಯರಿಗೆ ಒಬ್ಬರಿಗೆ 1250 ರೂ., ವಿದೇಶಿ ಮಕ್ಕಳಿಗೆ 750 ರೂ. ನಿಗದಿ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಭಾರಿ ಹೊಡೆತ ಕೊಟ್ಟಿದೆ.