ಮೈಸೂರು: ಮುಂದೆ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಮತ್ತೆ ಪ್ರಯತ್ನ ಮಾಡಿ ಎಂದು ಹೆಚ್.ವಿಶ್ವನಾಥ್ ಕುರಿತು ಸಾ.ರಾ.ಮಹೇಶ್ ವ್ಯಂಗ್ಯವಾಡಿದ್ದಾರೆ.
ತಾಪಂ-ಜಿಪಂ ಚುನಾವಣೆ ಬರುತ್ತೆ, ಅಲ್ಲಿ ಸ್ಪರ್ಧೆ ಮಾಡಿ: ವಿಶ್ವನಾಥ್ ಕಾಲೆಳೆದ ಸಾ.ರಾ.ಮಹೇಶ್ - Sa ra mahesh gave tont to h Vishwanath
ಮೈಸೂರಿನಲ್ಲಿ ಸಾ.ರಾ.ಮಹೇಶ್ ಸುದ್ದಿಗೋಷ್ಠಿ ನಡೆಸಿ, ಮುಂದೆ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಮತ್ತೆ ಪ್ರಯತ್ನ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಂಎಲ್ಸಿ ಸ್ಥಾನ ಕೈ ತಪ್ಪಿದ್ದು, ಇನ್ನು ಮುಂದೆ ಬರುವ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಪ್ರಯತ್ನ ಮಾಡಲಿ. ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ದ್ರೋಹ ಮಾಡಿ, ತಮ್ಮ ಐವತ್ತು ವರ್ಷದ ರಾಜಕೀಯ ದುರಂತಕ್ಕೆ ಸಾಕ್ಷಿಯಾಗಿದ್ದಾರೆ. ಇನ್ನು ಮುಂದಾದರೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹಳ್ಳಿಹಕ್ಕಿಗೆ ಎಚ್ಚರಿಕೆ ನೀಡಿದರು.
ಇನ್ನು ಮೈಮುಲ್ ಅಕ್ರಮ ನೇಮಕಾತಿ ಬಗ್ಗೆ ಹೈಕೋರ್ಟ್ ನೇಮಕಾತಿ ಪ್ರಕ್ರಿಯೆಯನ್ನು ನಡೆಸದಂತೆ ಮೂರು ವಾರಗಳ ಕಾಲ ತಡೆ ನೀಡಿದ್ದು, ನಮ್ಮ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಇನ್ನು ಮುಂದಾದರು ಪಾರದರ್ಶಕ ನೇಮಕಾತಿ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.