ಕರ್ನಾಟಕ

karnataka

By

Published : Nov 26, 2019, 5:42 PM IST

ETV Bharat / state

15 ಸ್ಥಾನ ಗೆದ್ದೇ ಗೆಲ್ತೇವೆ ಅನ್ನೋ ಬಿಜೆಪಿ: ಸಾ.ರಾ. ಮಹೇಶ್​ಗೆ ಇರೋ ಅನುಮಾನವೇನು?

15ಕ್ಕೆ 15 ಸ್ಥಾನ‌ ಗೆಲ್ಲುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕೇಳಿ ನನಗೆ ಇವಿಎಂ ಮೇಲೆ ಅನುಮಾನ ಶುರುವಾಗುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್​ ಹೇಳಿಕೊಂಡಿದ್ದಾರೆ.

evm machine
ಸಾ.ರಾ. ಮಹೇಶ್​ ಹೇಳಿಕೆ

ಮೈಸೂರು: ಈ ಉಪ ಚುನಾವಣೆಯಲ್ಲಿ 15ಕ್ಕೆ 15 ಸ್ಥಾನ‌ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ‌. ಇದನ್ನು ಗಮನಿಸಿದರೆ ಇವಿಎಂ ಮೇಲೆ ಅನುಮಾನ ಶುರುವಾಗುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್​ ಹೇಳಿಕೊಂಡಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವಿಎಂ ಬಗ್ಗೆ ಹಲವು ನಾಯಕರು ಹಿಂದೆ‌ ಹಲವು ಹೇಳಿಕೆಗಳನ್ನು ನೀಡಿದ್ದಾರೆ‌. ಆದ್ರೆ‌ ಈಗ ನನಗೂ ಸಣ್ಣದಾಗಿ ಅನುಮಾನ ಶುರುವಾಗಿದೆ‌. ಹಾಗಾಗಿ ಇವಿಎಂ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಾ.ರಾ. ಮಹೇಶ್​ ಹೇಳಿಕೆ

ಇನ್ನು ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್​ ನನ್ನನ್ನು ದುರ್ಯೋಧನ ಅಂತ ಕರೆದಿದ್ದಾರೆ. ದುರ್ಯೋಧನನಿಗೂ ಒಂದಷ್ಟು ಒಳ್ಳೆಯ ಗುಣಗಳಿವೆ. ಪುಣ್ಯಕ್ಕೆ ದುಶ್ಯಾಸನ ಅಂತ ಕರೆದಿಲ್ಲವೆಂದು ಹೆಚ್.ವಿಶ್ವನಾಥ್​ಗೆ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹರನ್ನೇ ಪ್ರಾಮಾಣಿಕರು ಅಂದ್ರೆ ಏನ್ ಹೇಳೋದು? ಶಾಸಕ ಬದುಕಿದ್ದಾಗಲೇ ಉಪ ಚುನಾವಣೆ ನಡಿಯುತ್ತಿರುವುದು ಮೈಸೂರು ಜಿಲ್ಲೆ ಇತಿಹಾಸದಲ್ಲೇ ಮೊದಲು. ಜನ ಎಲ್ಲವನ್ನೂ ಗಮನಿಸಿದ್ದಾರೆ. ಅವ್ರೇ ಎಲ್ಲದಕ್ಕೂ ಉತ್ತರ ನೀಡ್ತಾರೆ. ಸರ್ಕಾರ ಬೀಳಿಸಲು ಹೆಚ್.ವಿಶ್ವನಾಥ್ ಮುಂಬೈಗೆ ಹೋಗಿ ಕುಳಿತಿದ್ರು. ಪ್ರವಾಹ ಬಂದಾಗ ರೆಸಾರ್ಟ್ ಸೇರಿಕೊಂಡಿದ್ರು. ಜನರ ಕಷ್ಟ ಇವರಿಗೆ ಬೇಕಿಲ್ಲ. ಇಂತಹ ಅನರ್ಹರಿಗೆ ಸಚಿವ ಸ್ಥಾನ ನೀಡುವುದು ನಿಮ್ಮ ಗುರಿ ಅಂತೀರಿ. ಜನರ ಕಷ್ಟ ಕೇಳೋದು ನಿಮ್ಮ ಗುರಿ ಅಲ್ವಾ ಎಂದು ಸಿಎಂ ಯಡಿಯೂರಪ್ಪಗೆ ಸಾ.ರಾ.ಮಹೇಶ್ ಪ್ರಶ್ನಿಸಿದ್ರು.

ABOUT THE AUTHOR

...view details