ಮೈಸೂರು: ಮೈಮುಲ್ನಲ್ಲಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದೆ ಸಂದರ್ಶನಕ್ಕೆ ಕರೆಯುವ ಮೂಲಕ ಭ್ರಷ್ಟಾಚಾರ ಮಾಡಲು ಹೊರಟಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಅಂತಿಮ ಪಟ್ಟಿ ಪ್ರಕಟಿಸದೆ ಮೈಮುಲ್ನಲ್ಲಿ ಅಭ್ಯರ್ಥಿಗಳ ಸಂದರ್ಶನಕ್ಕೆ ಸಿದ್ಧತೆ: ಸಾ.ರಾ.ಮಹೇಶ್ ಆರೋಪ - ಮೈಮುಲ್ಗೆ ನೋಟೀಸ್ ನೀಡಿದ ಕೋರ್ಟ್
ಮೈಮುಲ್ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ ಭ್ರಷ್ಟಾಚಾರ ನಡೆದಿದೆ ಎಂದು ಹೈಕೋರ್ಟ್ನಲ್ಲಿ ಕೇಸ್ ಹಾಕಲಾಗಿದ್ದು, ಇದರಿಂದ ಕೋರ್ಟ್ ಮೈಮುಲ್ಗೆ ನೋಟಿಸ್ ನೀಡಿ ಅಂತಿಮ ಪಟ್ಟಿ ಪ್ರಕಟಿಸದಂತೆ ತಡೆ ನೀಡಿತ್ತು.
ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ಮೈಮುಲ್ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ ಭ್ರಷ್ಟಾಚಾರ ನಡೆದಿದೆ ಎಂದು ಹೈಕೋರ್ಟ್ನಲ್ಲಿ ಕೇಸ್ ಹಾಕಲಾಗಿದ್ದು, ಇದರಿಂದ ಕೋರ್ಟ್ ಮೈಮುಲ್ಗೆ ನೋಟಿಸ್ ನೀಡಿ ಅಂತಿಮ ಪಟ್ಟಿ ಪ್ರಕಟಿಸದಂತೆ ತಡೆ ನೀಡಿತ್ತು ಎಂದು ಹೇಳಿದರು.
ಆದರೂ ಇದನ್ನು ಲೆಕ್ಕಿಸದೇ ಮೈಮುಲ್ನ ಅಧ್ಯಕ್ಷರು ಸಂದರ್ಶನ ಕರೆದಿದ್ದು, ಇದು ಕೋರ್ಟ್ನ ಆದೇಶದ ಉಲ್ಲಂಘನೆಯಾಗಿದೆ. ಈ ಮೂಲಕ ಪೂರ್ತಿ ಹಣವನ್ನು ಸೆಟಲ್ ಮಾಡಿಸಿಕೊಳ್ಳಲು ಸಂದರ್ಶನದ ನಾಟಕವಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇವರಿಗೆ ಅಭ್ಯರ್ಥಿಗಳು ಹಣ ಕೊಟ್ಟು ಮೋಸ ಹೋಗಬೇಡಿ ಎಂದರು.