ಕರ್ನಾಟಕ

karnataka

ETV Bharat / state

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ: ಎಸ್​​​​​ ಟಿ ಸೋಮಶೇಖರ್ ವಿಶ್ವಾಸ - karnataka bypoll result

ಹಿಂದೆ ಶೇಕಡಾವಾರು ಮತದಾನ ಕಡಿಮೆಯಾದರೆ ಬಿಜೆಪಿಗೆ ಕಷ್ಟ ಆಗುತ್ತಿತ್ತು. ಆದರೆ, ಈಗ ಅದು ಇಲ್ಲ, ನಾವು ಆರ್​​​​ಆರ್ ನಗರವನ್ನು 20,000 ಲೀಡ್​​ನಿಂದ ಗೆಲ್ಲುತ್ತೇವೆ. ಕೋವಿಡ್ ನಡುವೆಯೂ ಶೇ. 45ರಷ್ಟು ಮತದಾನ ನಡೆದಿರುವುದು ಹೆಚ್ಚೇ ಎಂದಿರುವ ಸೋಮಶೇಖರ್​​ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Minister ST Somsheker
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್

By

Published : Nov 4, 2020, 1:26 PM IST

ಮೈಸೂರು: ಎರಡೂ ಉಪ ಚುನಾವಣೆಯನ್ನು ಗೆಲ್ಲುತ್ತೇವೆ, ಈಗಾಗಲೇ ಶಿರಾದಲ್ಲಿ ಜಯಚಂದ್ರ ಸೋಲನ್ನು ಒಪ್ಪಿಕೊಂಡು ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಜಿಲ್ಲಾ ಪಂಚಾಯಿತಿಯಲ್ಲಿ ತಲಕಾಡು ಪಂಚಲಿಂಗ ದರ್ಶನದ ಪೂರ್ವಭಾವಿ ಸಭೆಗೆ ಆಗಮಿಸಿದ ಸಚಿವ ಎಸ್.ಟಿ.ಸೋಮಶೇಖರ್​ ಮಾತನಾಡಿ, ಶಿರಾ ಹಾಗೂ ಆರ್​ಆರ್​ ನಗರ ಎರಡೂ ಕಡೆಯೂ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಶಿರಾದಲ್ಲಿ 15,000ಕ್ಕೂ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುತ್ತೇವೆ, ಜಯಚಂದ್ರ ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ. ಎರಡೂ ಕಡೆ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದರು.

ಉಪಚುನಾವಣೆ ಫಲಿತಾಂಶ ಕುರಿತು ಎಸ್​ ಟಿ ಸೋಮಶೇಖರ್ ಪ್ರತಿಕ್ರಿಯೆ

ಆರ್​​​​ಆರ್​​​​ ನಗರದಲ್ಲಿ ಕಡಿಮೆ ಮತದಾನ ಆಗಿದ್ದು, ಇದು ಬಿಜೆಪಿಗೆ ಗೆಲ್ಲಲು ತೊಂದರೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ, ಹಿಂದೆ ಶೇಕಡಾವಾರು ಮತದಾನ ಕಡಿಮೆಯಾದರೆ ಬಿಜೆಪಿಗೆ ಕಷ್ಟ ಆಗುತ್ತಿತ್ತು. ಆದರೆ, ಈಗ ಅದು ಇಲ್ಲ, ನಾವು ಆರ್​​​​ಆರ್ ನಗರವನ್ನು 20,000 ಲೀಡ್​​ನಿಂದ ಗೆಲ್ಲುತ್ತೇವೆ. ಕೋವಿಡ್ ನಡುವೆಯೂ ಶೇ. 45ರಷ್ಟು ಮತದಾನ ನಡೆದಿರುವುದು ಹೆಚ್ಚೇ ಎಂದರು.

ಶಿರಾದ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಇವಿಎಂ ಮಿಷನ್​​​ಗಳ ಬಗ್ಗೆ ಸಂಶಯ ವ್ಯಕ್ತಪಡಿಸಿರುವುದನ್ನು ನೋಡಿದರೆ ಸೋಲು ಒಪ್ಪಿಕೊಂಡ ಹಾಗೆ ಕಾಣಿಸುತ್ತದೆ, ಎಲೆಕ್ಷನ್ ಕೌಂಟಿಂಗ್ ಸಾರ್ವಜನಿಕವಾಗಿ ನಡೆದಿದೆ, 15 ರಿಂದ 20,000 ಲೀಡ್​​ನಲ್ಲಿ ಜಯಚಂದ್ರ ಸೋಲುತ್ತೇನೆ ಎಂದು ಗೊತ್ತಾಗಿದೆ ಅದಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದರು.

ಇನ್ನು ಡಿಸೆಂಬರ್​​​ನಲ್ಲಿ ತಲಕಾಡು ಪಂಚಲಿಂಗ ದರ್ಶನ ನಡೆಯಲಿದ್ದು, ದಸರಾದ‌ ರೀತಿಯಲ್ಲಿ ಸರಳವಾಗಿ ಯಾವ ರೀತಿ ನಡೆಸಬೇಕು ಎಂಬುದನ್ನು ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಂಡು ನಂತರ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದರು.

ABOUT THE AUTHOR

...view details