ಕರ್ನಾಟಕ

karnataka

ಬಿಜೆಪಿ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲುತ್ತಾರೆ: ಎಸ್. ಟಿ ಸೋಮಶೇಖರ್ ವಿಶ್ವಾಸ

By

Published : Jun 3, 2022, 8:17 PM IST

ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಸಂಬಂಧ ಮುಖ್ಯಮಂತ್ರಿಗಳೇ ಅಖಾಡಕ್ಕಿಳಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೂರಕ್ಕೆ ನೂರರಷ್ಟು ಸಮಸ್ಯೆ ಬಗೆಹರಿಸುತ್ತಾರೆ ಎಂದು ಸಚಿವ ಎಸ್‌. ಟಿ ಸೋಮಶೇಖರ್ ಹೇಳಿದರು.

s-t-somashekhar
s-t-somashekhar

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲುತ್ತಾರೆ ಎಂದು ಸಚಿವ ಎಸ್‌. ಟಿ ಸೋಮಶೇಖರ್ ಹೇಳಿದರು. ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ವಿಚಾರವಾಗಿ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಪ್ರತಿಸ್ಪರ್ಧಿಯೇ ಇಲ್ಲ. ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಒಂದು ಬಾರಿಯೂ ಗೆದ್ದಿಲ್ಲ. ಜೆಡಿಎಸ್​ಗೆ ಯಾರೂ ಕೂಡ ಬೆಂಬಲ ನೀಡುತ್ತಿಲ್ಲ ಎನ್ನುವ ಮಾಹಿತಿ ಇದೆ. ಪದವೀಧರರು ಪ್ರಬುದ್ಧರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಮತ ನೀಡಿದರೆ ಅನುಕೂಲ ಆಗುತ್ತೆ ಅಂತ ಮತ ನೀಡಲಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಿಂದ ನಮಗೆ ಯಾವುದೇ ತೊಂದರೆ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಎಸ್‌. ಟಿ ಸೋಮಶೇಖರ್ ಮಾತನಾಡಿರುವುದು

ಜೂ. 8 ರಂದು ಮೈಸೂರಿಗೆ ಸಿಎಂ ಬೊಮ್ಮಾಯಿ ಆಗಮಿಸಲಿದ್ದಾರೆ. ನಾಲ್ಕು ಜಿಲ್ಲೆಗಳ ಪ್ರಮುಖರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಮೈ. ವಿ ರವಿಶಂಕರ್ ಗೆಲುವು ಖಚಿತ ಎಂದು ಹೇಳಿದರು‌‌. ಜೂ‌. 21ರಂದು ಮೈಸೂರಿಗೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಮಾತನಾಡಿ, ನಿನ್ನೆ ಕೇಂದ್ರದ ಆಯುಷ್ ಅಧಿಕಾರಿಗಳು ಅರಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

12 ಸಾವಿರ ಜನ ಸಾರ್ವಜನಿಕರಿಗೆ ಹಾಗೂ 3 ಸಾವಿರ ಜನ ಇತರರಿಗೆ ನೀಡುವ ಕುರಿತು ಚರ್ಚೆ ಆಗಿದೆ. ಒಟ್ಟು 15 ಸಾವಿರ ಜನರು ಅವಕಾಶ ಕಲ್ಪಿಸುವ ಗುರಿ ಇದೆ. ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ಮಾಡಿ ಮಾಹಿತಿ ನೀಡುತ್ತೇನೆ. ಜೂ. 8 ರಂದು ಮೈಸೂರಿಗೆ ಸಿಎಂ ಬೊಮ್ಮಾಯಿ ಕೂಡಾ ಆಗಮಿಸಿ ರೂಪುರೇಷೆ ಫೈನಲ್ ಮಾಡಲಿದ್ದಾರೆ ಎಂದು ತಿಳಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ ವಿಚಾರವಾಗಿ ಮಾತನಾಡಿ, ಇಂದು ಮುಖ್ಯಮಂತ್ರಿಗಳು ಇದಕ್ಕೆ ಸಂಬಂಧಿಸಿದಂತೆ ಎಲ್ಲರ ಸಭೆ ಕರೆದಿದ್ದಾರೆ. ಬಿ. ಸಿ ನಾಗೇಶ್ ಅವರು ಗುಜರಾತ್ ಪ್ರವಾಸ ಮುಗಿಸಿ ಬಂದಿದ್ದಾರೆ. ಇಂದು ಎಲ್ಲರ ಅಭಿಪ್ರಾಯ ಪಡೆದು ವಿವಾದಕ್ಕೆ ಇತಿಶ್ರೀ ಹಾಡಲಿದ್ದಾರೆ. ವಿವಾದ ಸಂಬಂಧ ಮುಖ್ಯಮಂತ್ರಿಗಳೇ ಅಖಾಡಕ್ಕಿಳಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೂರಕ್ಕೆ ನೂರರಷ್ಟು ಸಮಸ್ಯೆ ಬಗೆಹರಿಸುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಓದಿ:ಮೈಸೂರು ದಶಪಥ ಹೆದ್ದಾರಿ ನಿರ್ಮಾಣ, ಸಾಂಸ್ಕೃತಿಕ ನಗರಿಗೆ ಸಿಗಲಿದೆ ಅಭಿವೃದ್ಧಿಯ ವೇಗ

TAGGED:

ABOUT THE AUTHOR

...view details