ಕರ್ನಾಟಕ

karnataka

ETV Bharat / state

ಪಡಿತರಕ್ಕೆ ಹಣ ಪಡೆದರೆ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು: ಎಸ್.ಟಿ.ಸೋಮಶೇಖರ್ - latest corona news

ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಏರ್ಪಡಿಸಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಮಾತನಾಡಿ, ಪಡಿತರ ನೀಡಲು ಹಣ ಪಡೆದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

S. T. Somashekar t
ಸಚಿವ ಎಸ್. ಟಿ. ಸೋಮಶೇಖರ್

By

Published : Apr 11, 2020, 1:23 PM IST

ಮೈಸೂರು : ಪಡಿತರ ನೀಡಲು ನ್ಯಾಯಬೆಲೆ ಅಂಗಡಿಗಳು ಬಡವರಿಂದ ಹಣ ಪಡೆದರೆ ಅಂತಹ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.

ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಏರ್ಪಡಿಸಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಶೇಖರ್, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ನೀಡಲು 20 ರಿಂದ 50 ರೂ. ಪಡೆಯಲಾಗುತ್ತಿದೆ. ಇದರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ದುಡ್ಡು ಪಡೆದು ಪಡಿತರ ನೀಡುತ್ತಿರುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು ಎಂದರು.

ನಂಜನಗೂಡು ತಾಲೂಕು ಕೊರೊನಾ ಹಾಟ್​ಸ್ಪಾಟ್ ಆಗಿರುವುದರಿಂದ ತರಕಾರಿ ಹಾಗೂ ದಿನಸಿ ಪದಾರ್ಥಗಳು ತಲುಪುತ್ತಿಲ್ಲ ಎಂದು ದೂರುಗಳು ಬಂದಿವೆ. ಇದರ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮುಂದಿನ ಕ್ರಮವಹಿಸುತ್ತೇನೆ ಎಂದರು.

ಸಚಿವ ಎಸ್. ಟಿ. ಸೋಮಶೇಖರ್

ಶಾಸಕ ಎಲ್‌.ನಾಗೇಂದ್ರ ಅವರು ಮಾತನಾಡಿ, ಎಂಟು ಪದಾರ್ಥಗಳಿರುವ ಆಹಾರ ಕಿಟ್ 8 ಸಾವಿರ ಮಂದಿಗೆ ನೀಡಲಾಗುವುದು. ಸಾರ್ವಜನಿಕರು ಆತಂಕ ಪಡಬೇಡಿ ಎಂದು ಹೇಳಿದರು.

ABOUT THE AUTHOR

...view details