ಮೈಸೂರು: ಮೈಸೂರು-ನಂಜನಗೂಡಿನ ಪ್ರಮುಖ ರಸ್ತೆಯಲ್ಲಿರುವ ವಿವಾದಿತ ಬಸ್ ತಂಗುದಾಣದ ಮೇಲೆ ಅಳವಡಿಸಿರುವ ಗುಂಬಜ್ ಮಾದರಿಯ ಎರಡು ಗೋಪುರಗಳನ್ನು ತೆರವುಗೊಳಿಸಲಾಗಿದ್ದು ಈ ಸಂಬಂಧ ಶಾಸಕ ಎಸ್ ಎ ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.
ವಿವಾದಿತ ಬಸ್ ತಂಗುದಾಣದ ಮೇಲಿನ ಎರಡು ಗೋಪುರ ತೆರವು: ಎಸ್ ಎ ರಾಮದಾಸ್ - dome shaped bus stop
ಮೈಸೂರು - ನಂಜನಗೂಡು ರಸ್ತೆಯಲ್ಲಿರುವ ಬಸ್ ತಂಗುದಾಣದ ಶೆಲ್ಟರ್ ಮೇಲೆ ಅಳವಡಿಸಿರುವ ಗುಂಬಜ್ ಮಾದರಿಯ ಎರಡು ಗೋಪುರಗಳನ್ನು ತೆರವುಗೊಳಿಸಿರುವ ಕುರಿತು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

'ಬಸ್ ತಂಗುದಾಣ ವಿವಾದಿತ ಕೇಂದ್ರವಾಗಬಾರದು ಎನ್ನುವ ಕಾರಣಕ್ಕೆ ಗೋಪುರಗಳನ್ನು ತೆರವುಗೊಳಿಸಲಾಗಿದೆ. 12 ಬಸ್ ನಿಲ್ದಾಣದ ಶೆಲ್ಟರ್ ಅನ್ನು ಇದೇ ಮಾದರಿಯಲ್ಲಿ ನಿರ್ಮಿಸಲಾಗುವುದು. ಅರಮನೆ ಮಾದರಿಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡುವುದು ನನ್ನ ಉದ್ದೇಶವಾಗಿತ್ತು. ಆದ್ರೆ, ಅನಾವಶ್ಯಕವಾಗಿ ಇದಕ್ಕೆ ಧರ್ಮದ ಲೇಪನ ನೀಡಿದ್ದು ನೋವಾಗಿದೆ. ಹಿರಿಯರ, ಸಲಹೆಗಾರರ ಜೊತೆ ಚರ್ಚೆ ಮಾಡಿ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಯಾರು ಅನ್ಯಥಾ ಭಾವಿಸಬಾರದು' ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ವಿವಾದಿತ ಬಸ್ ನಿಲ್ದಾಣದಲ್ಲಿ ಸುತ್ತೂರು ಶ್ರೀ, ಬೊಮ್ಮಾಯಿ, ಮೋದಿ ಫೋಟೋ.. ಪೊಲೀಸರಿಂದ ಭದ್ರತೆ