ಕರ್ನಾಟಕ

karnataka

ETV Bharat / state

ಆರ್ಥಿಕ ಚೇತರಿಕೆಯತ್ತ ಗ್ರಾಮಾಂತರ ಸಾರಿಗೆ - Rural transport is running good

ನಷ್ಟದಿಂದ ಕಂಗೆಟ್ಟಿದ್ದ ಸಾರಿಗೆ ಬಸ್​​ಗಳಿಗೆ ಪ್ರಯಾಣಿಕರು ಕೊರೊನಾಗೆ ಅಂಜದೇ ಬರುತ್ತಿರುವುದರಿಂದ ಗ್ರಾಮಾಂತರ ಸಾರಿಗೆಗೆ ಸ್ಫೂರ್ತಿ ಸಿಕ್ಕಿದಂತಾಗಿದೆ ಎಂದು ಗ್ರಾಮಾಂತರ ಸಾರಿಗೆ ನಿಯಂತ್ರಣಾಧಿಕಾರಿ ಹೇಮಂತ್ ಕುಮಾರ್ ಹೇಳಿದ್ದಾರೆ.

ಆರ್ಥಿಕ ಚೇತರಿಕೆಯತ್ತ ಮುಖ ಮಾಡುತ್ತಿರುವ ಗ್ರಾಮಾಂತರ ಸಾರಿಗೆ
ಆರ್ಥಿಕ ಚೇತರಿಕೆಯತ್ತ ಮುಖ ಮಾಡುತ್ತಿರುವ ಗ್ರಾಮಾಂತರ ಸಾರಿಗೆ

By

Published : Nov 23, 2020, 5:04 PM IST

Updated : Nov 23, 2020, 5:41 PM IST

ಮೈಸೂರು:ಕೊರೊನಾದಿಂದ ಕಂಗೆಟ್ಟಿದ್ದ ಗ್ರಾಮಾಂತರ ಸಾರಿಗೆ ಅನ್​ಲಾಕ್​​ ಬಳಿಕ ಆರ್ಥಿಕ ಚೇತರಿಕೆಯತ್ತ ಮುಖ ಮಾಡುತ್ತಿರುವುದು ಅಧಿಕಾರಿಗಳಿಗೆ ಚೈತನ್ಯ ನೀಡಿದಂತಾಗಿದೆ.

ಆರ್ಥಿಕ ಚೇತರಿಕೆಯತ್ತ ಗ್ರಾಮಾಂತರ ಸಾರಿಗೆ

ಕೊರೊನಾ ನಡುವೆ ಸಾರಿಗೆ ಬಸ್​ಗಳ ಸಂಚಾರ ಯಥಾಸ್ಥಿತಿಗೆ ಬರುತ್ತಿರುವುದರಿಂದ ಪ್ರತಿನಿತ್ಯ 1600 ರೌಂಡ್ಸ್ ಬಸ್​ಗಳ ಸಂಚಾರವಾಗುತ್ತಿದೆ. ಬೆಂಗಳೂರು-ಮೈಸೂರು ಸೇರಿದಂತೆ ಎಲ್ಲ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೂ ನಿರಾತಂಕವಾಗಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಬಸ್​ಗಳ ಸಂಚಾರ ಏರಿದಂತೆ ಸಾರಿಗೆ ಬೊಕ್ಕಸಕ್ಕೆ ಅನುಕೂಲವಾಗುತ್ತಿದೆ‌.

ನಷ್ಟದಿಂದ ಕಂಗೆಟ್ಟಿದ್ದ ಸಾರಿಗೆ ಬಸ್​​ಗಳಿಗೆ ಪ್ರಯಾಣಿಕರು ಕೊರೊನಾಗೆ ಅಂಜದೆ ಬರುತ್ತಿರುವುದರಿಂದ ಗ್ರಾಮಾಂತರ ಸಾರಿಗೆಗೆ ಸ್ಫೂರ್ತಿ ಸಿಕ್ಕಿದಂತಾಗಿದೆ ಎಂದು ಗ್ರಾಮಾಂತರ ಸಾರಿಗೆ ನಿಯಂತ್ರಣಾಧಿಕಾರಿ ಹೇಮಂತ್ ಕುಮಾರ್ ಹೇಳಿದ್ದಾರೆ.

Last Updated : Nov 23, 2020, 5:41 PM IST

ABOUT THE AUTHOR

...view details