ಕರ್ನಾಟಕ

karnataka

ETV Bharat / state

ಚಾಮರಾಜೇಂದ್ರ ಮೃಗಾಲಯದಲ್ಲಿ 7 ಮರಿಗಳಿಗೆ ಜನ್ಮ ನೀಡಿದ ರಡ್ಡಿ ಶೀಲ್​ ಬಾತುಕೋಳಿ - Red Shield Duck

ಚಾಮರಾಜೇಂದ್ರ ಮೃಗಾಲಯದಲ್ಲಿದ್ದ ರಡ್ಡಿ ಶೀಲ್​ ಎಂಬ ಹೆಸರಿನ ಬಾತುಕೋಳಿಯು ಯೂರೋಪ್​​ನಲ್ಲಿ ಮಾತ್ರ ಬ್ರೀಡ್ ಆಗುತ್ತಿದ್ದು, ಇದೀಗ ಮೈಸೂರು ಮೃಗಾಲಯದಲ್ಲಿ 7 ಮರಿಗಳಿಗೆ ಜನ್ಮ ನೀಡಿದೆ.

Sri Chamarajendra Zoo
ಶ್ರೀ ಚಾಮರಾಜೇಂದ್ರ ಮೃಗಾಲಯ

By

Published : May 2, 2020, 2:56 PM IST

ಮೈಸೂರು:ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ರಡ್ಡಿ ಶೀಲ್​ ಬಾತುಕೋಳಿಯು ಬ್ರೀಡ್​​ ಆಗಿದೆ ಎಂದು ಮೃಗಾಲಯದ ಕಾರ್ಯ ನಿರ್ವಹಣಾ ಅಧಿಕಾರಿ ಅಜೀತ್ ಕುಲಕರ್ಣಿ ತಿಳಿಸಿದ್ದಾರೆ.

ಭಾರತದಲ್ಲಿ 1978 ರಲ್ಲಿ ಗುಜರಾತ್​​ನಲ್ಲಿ ಈ ಬಾತುಕೋಳಿಯ ಬ್ರೀಡ್ ಆಗಿತ್ತು. ಅದನ್ನು ಬಿಟ್ಟರೆ ಇದೀಗ ಏಳು ಮರಿಗಳಿಗೆ ರಡ್ಡಿ ಶೀಲ್ ಬಾತುಕೋಳಿ ಜನ್ಮ ನೀಡಿದೆ. ಎಲ್ಲಾ ಮರಿಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜೀತ್ ಕುಲಕರ್ಣಿ ತಿಳಿಸಿದರು.

ಶ್ರೀ ಚಾಮರಾಜೇಂದ್ರ ಮೃಗಾಲಯ, ಮೈಸೂರು

ಮೃಗಾಲಯಕ್ಕೆ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಇಲ್ಲಿನ ಮೇಸನ್ ಎಂಬ ಪ್ರಾಣಿ ಮನುಷ್ಯರನ್ನು ಜಾಸ್ತಿ ಇಷ್ಟಪಡುತ್ತಿದ್ದು, ಆದರೆ ಲಾಕ್​ಡೌನ್​​ನಿಂದ ಮನುಷ್ಯರನ್ನು ನೋಡದೆ ಈ ಪ್ರಾಣಿ ಬೇಸರದಲ್ಲಿದೆ ಎಂದು ಅಜೀತ್ ಕುಲಕರ್ಣಿ ಹೇಳಿದ್ದಾರೆ.

ABOUT THE AUTHOR

...view details