ಮೈಸೂರು:ಬೈಕ್ ಕಳವು ಪ್ರಕರಣವೊಂದನ್ನು ತನಿಖೆ ಮಾಡುವಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಮುಖಂಡ ರಾಜು ಕೊಲೆ ಪ್ರಕರಣದ ಆರೋಪಿ ಅಬೀದ್ ಪಾಷ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ನಗರದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಬಗೆಹರಿಸಿದ ಸಿಸಿಬಿ ಪೊಲೀಸರು, ಆರೋಪಿ ಅಬ್ದುಲ್ ರಹೀಂ (21) ಎಂಬಾತನನ್ನು ಬಂಧಿಸಿದ್ದರು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ 4 ಲಕ್ಷ ರೂ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ ಬಗ್ಗೆ ಬಾಯ್ಬಿಟ್ಟಿದ್ದ. ಅಲ್ಲದೆ ತನಗೆ ಬೈಕ್ ಕಳವು ಮಾಡುವಂತೆ ಆಬಿದ್ ಪಾಷಾ ಪ್ರೇರೇಪಿಸಿದ್ದ ಎಂದು ಹೇಳಿದ್ದಾನೆ