ಮೈಸೂರು: ಗಾಂಜಾ ಬೆಳೆದವರು ಹಾಗೂ ಮಾರಾಟ ಮಾಡುವವರ ವಿರುದ್ಧ ಇನ್ಮುಂದೆ ರೌಡಿ ಶೀಟ್ ತೆರೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.
ಗಾಂಜಾ ಬೆಳೆದವರು, ಮಾರಾಟ ಮಾಡುವವರ ವಿರುದ್ಧ ರೌಡಿ ಶೀಟ್: ಎಸ್ಪಿ ರಿಷ್ಯಂತ್ - rowdysheeter open
ಜಮೀನುಗಳಲ್ಲಿ ರೈತರು ಕೃಷಿ ಚಟುವಟಿಕೆ ಜೊತೆ, ಗಾಂಜಾ ಬೆಳೆದು ಮಾರಾಟ ಮಾಡಲು ಮುಂದಾದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ 9 ಗಾಂಜಾ ಕೇಸ್‌ಗಳ ಪತ್ತೆಯಾಗಿದ್ದು, ಗಾಂಜಾ ಬೆಳೆಗಾರರು ಹಾಗೂ ಮಾರಾಟಗಾರರಿಗೆ ಜಾಮೀನು ನೀಡದಂತೆ ಕೋರಿ ಪತ್ರ ಬರೆಯಲು ಮುಂದಾಗಿರುವುದಾಗಿ ತಿಳಿಸಿದರು. ಜಮೀನುಗಳಲ್ಲಿ ರೈತರು ಕೃಷಿ ಚಟುವಟಿಕೆ ಜೊತೆ, ಗಾಂಜಾ ಬೆಳೆ ಹಾಗೂ ಮಾರಾಟ ಮಾಡಲು ಮುಂದಾದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ನಂಜುಂಡೇಶ್ವರ ದೇವಸ್ಥಾನದ ಮುಂದೆ ಮಗು ಅಪಹರಣ ಪ್ರಕರಣ ತನಿಖೆ ಚುರುಕುಗೊಂಡಿದೆ ಎಂದು ಅವರು ಇದೇ ವೇಳೆ ತಿಳಿಸಿದರು.