ಮೈಸೂರು :ಕುಡಿದ ಅಮಲಿನಲ್ಲಿ ಇಬ್ಬರು ರೌಡಿ ಶೀಟರ್ಗಳ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಒಬ್ಬ ರೌಡಿ ಶೀಟರ್ ಕೊಲೆಯಾಗಿ, ಮತ್ತೊಬ್ಬ ರೌಡಿಶೀಟರ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದ ಕೆ ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ರೌಡಿ ಶೀಟರ್ ಶ್ರೀ ಗಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಮತ್ತೊಬ್ಬ ರೌಡಿ ಶೀಟರ್ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾನೆ. ಈತ ಕೆ ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದಾನೆ.
ಈ ಇಬ್ಬರು ರೌಡಿ ಶೀಟರ್ಗಳು ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ಗಲಾಟೆ ವೇಳೆ ಮೈಸೂರು ಕಾಕರವಾಡಿ ಬಡಾವಣೆಯ ನಿವಾಸಿ ಶ್ರೀಗಂಧ ಸಾವನ್ನಪ್ಪಿದ್ದಾನೆ.
ಮೂವರ ಬಂಧನ : ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಆರ್ ಪೊಲೀಸರು ಮೂವರನ್ನು ಬಂಧಿಸಿದ್ದು, ಅದರಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿಶೀಟರ್ ರವಿ ತಂದೆ ರಮೇಶ್, ಸ್ನೇಹಿತರಾದ ಮುಜೀಬ್ ಹಾಗೂ ಹರೀಶ್ ಎಂಬುವರನ್ನು ಪೊಲೀಸರನ್ನು ಬಂದಿಸಿದ್ದು, ತನಿಖೆ ನಡೆಸಲಾಗಿದೆ. ಈ ಇಬ್ಬರು ಭಾನುವಾರ ರಾತ್ರಿ ಕೆ ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕುಡಿದ ಅಮಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಒಬ್ಬ ರೌಡಿ ಶೀಟರ್ ಕೊಲೆಯಾಗಿದ್ದು, ಮತ್ತೊಬ್ಬ ರೌಡಿ ಶೀಟರ್ಗೆ ಗಾಯಗಳಾಗಿವೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ಬಂಧಿತ ಮೂವರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜು ಈಟಿವಿ ಭಾರತ್ ಗೆ ಮಾಹಿತಿ ನೀಡಿದ್ದಾರೆ.