ಕರ್ನಾಟಕ

karnataka

ETV Bharat / state

ತನ್ವೀರ್​ ಸೇಠ್​ ಹಲ್ಲೆ ಹಿಂದಿನ ಪಿತೂರಿ ಬೇಗ ಕಂಡು ಹಿಡಿಯಬೇಕು.. ರೋಷನ್‌ ಬೇಗ್ ಆಗ್ರಹ

ತನ್ವೀರ್ ಸೇಠ್ ಮೇಲೆ ನಡೆದಿರುವ ಘಟನೆ ಹಿಂದಿರುವ ಪಿತೂರಿಯನ್ನು ಬೇಗ ಕಂಡು ಹಿಡಿಯಬೇಕೆಂದು ಮಾಜಿ ಸಚಿವ ಆರ್‌. ರೋಷನ್‌ ಬೇಗ್ ಆಗ್ರಹಿಸಿದರು.

ರೋಷನ್‌ ಬೇಗ್ ಆಗ್ರಹ

By

Published : Nov 19, 2019, 7:48 PM IST

ಮೈಸೂರು: ತನ್ವೀರ್ ಸೇಠ್ ಮೇಲೆ ನಡೆದಿರುವ ಘಟನೆ ಹಿಂದಿರುವ ಪಿತೂರಿಯನ್ನು ಬೇಗ ಕಂಡು ಹಿಡಿಯಬೇಕೆಂದು ಮಾಜಿ ಸಚಿವ ಆರ್‌. ರೋಷನ್‌ ಬೇಗ್ ಆಗ್ರಹಿಸಿದ್ದಾರೆ.

ಮಾಜಿ ಸಚಿವ ಆರ್‌.ರೋಷನ್‌ ಬೇಗ್..

ಇಂದು ಆಸ್ಪತ್ರೆಯಲ್ಲಿ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರೋಷನ್ ಬೇಗ್, ಇಲ್ಲಿ ರಾಜಕೀಯ ಮಾತನಾಡುವುದಿಲ್ಲ. ಶಾಸಕರ ಮೇಲೆ ಹಲ್ಲೆ ಆಗಿರುವುದು ನನಗೆ ಬಹಳ ನೋವು ತಂದಿದೆ. ಸರ್ಕಾರಕ್ಕೆ, ಸಿಎಂ ಹಾಗೂ ಗೃಹ ಮಂತ್ರಿಗಳಿಗೆ ಹೇಳುವುದು ಏನೆಂದರೆ ಇದರ ಹಿಂದೆ ಇರುವ ಪಿತೂರಿಯನ್ನು ಬೇಗ ಕಂಡು ಹಿಡಿಯಬೇಕು. ಇವರ ತಂದೆ ಅಜೀಜ್ ಸೇಠ್ ನನ್ನ ರಾಜಕೀಯ ಗುರುಗಳು. ಅವರ ಮಗನಿಗೆ ಈ ರೀತಿ ಆಗಿರುವುದು ನನಗೆ ನೋವು ತಂದಿದೆ. ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ABOUT THE AUTHOR

...view details