ಕರ್ನಾಟಕ

karnataka

ETV Bharat / state

ತವರು ಮನೆ ಬಿಟ್ಟು ಹೋಗುತ್ತಿರುವ ಅನುಭವವಾಗ್ತಿದೆ : ರೋಹಿಣಿ ಸಿಂಧೂರಿ

ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆಯಾದ ಬಳಿಕ ರೋಹಿಣಿ ಸಿಂಧೂರಿ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಿಂದ ನಿರ್ಗಮಿಸುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Rohini Sindhuri reaction
ರೋಹಿಣಿ ಸಿಂಧೂರಿ

By

Published : Jun 7, 2021, 12:25 PM IST

ಮೈಸೂರು : ವರ್ಗಾವಣೆ ನಿರೀಕ್ಷೆ ಮಾಡಿರಲಿಲ್ಲ, ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ವರ್ಗಾವಣೆ ಆಗಿದೆ ಎಂದು ವರ್ಗಾವಣೆಯ ನಂತರ ಮೊದಲ ಪ್ರತಿಕ್ರಿಯೆಯಲ್ಲಿ ರೋಹಿಣಿ ಸಿಂಧೂರಿ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ನಿರ್ಗಗಮಿತ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಮೈಸೂರಿಗೆ ಬಂದಾಗ ತಾಯಿಯ ಮನೆಯ ಅನುಭವ ನೀಡಿದೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲಾ ಜನತೆಗೆ ಧನ್ಯವಾದ ಹೇಳುತ್ತೇನೆ. ಇಂದು ಹೊಸ ಜಿಲ್ಲಾಧಿಕಾರಿಗೆ ಶುಭಾಶಯ ಹೇಳಲು ಬಂದಿದ್ದೇನೆ. ಮೈಸೂರಿನ ಎಲ್ಲಾ ವಿಷಯಗಳನ್ನು ವಸ್ತುನಿಷ್ಠವಾಗಿ ಹೇಳಿದ್ದೇನೆ. ಈ ಸಮಯದಲ್ಲಿ ವರ್ಗಾವಣೆಯನ್ನು ನಿರೀಕ್ಷೆ ಮಾಡಿರಲಿಲ್ಲ, ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಈ ವರ್ಗಾವಣೆಯಾಗಿದೆ. ನನಗೆ ತವರು ಮನೆಯನ್ನು ಬಿಟ್ಟು ಹೋಗುತ್ತಿರುವ ಅನುಭವವಾಗುತ್ತಿದೆ ಎಂದು ಹೇಳಿದರು.

ವರ್ಗಾವಣೆ ಬಳಿಕ ರೋಹಿಣಿ ಸಿಂಧೂರಿ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ

ಮೈಸೂರಿನಲ್ಲಿ ಏನು ನಡೆದಿದೆ ಎಂಬುದು ಎಲ್ಲರಿಗೆ ಗೊತ್ತಿದೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕೆಲವರು ಹತಾಶೆ ಮತ್ತು ಅಭದ್ರತೆಯ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಶಿಲ್ಪಾನಾಗ್​ಗೆ ಟಾಂಗ್ ನೀಡಿದರು. ಯಾವುದೋ ಅಧಿಕಾರಿಯನ್ನು ತೆಗೆಸಿ ಮಿಷನ್ ಮುಗಿಯಿತು ಎಂದು ಹೇಳುವುದು ತಪ್ಪು. ಈ ರೀತಿ ಯಾವ ಸಂಸ್ಥೆಯಲ್ಲಿ ಆದರೂ, ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲ ಎಂದರು

ಭೂ ಮಾಫಿಯಾದ ಕುರಿತು ಮಾಧ್ಯಮಗಳ ಪ್ರಶ್ನೆಗೆ ನೋ ಕಮೆಂಟ್ ಎಂದು ಉತ್ತರಿಸಿದ ಸಿಂಧೂರಿ, ಕೊನೆಯದಾಗಿ ಮೈಸೂರಿನ ಎಲ್ಲಾ ಜನತೆಗೆ " ಮೈಸೂರು ಥ್ಯಾಂಕ್ಸ್" ಎಂದು ಹೇಳಿದರು.

ಓದಿ : ಅವರೂ ವರ್ಗಾವಣೆಯಾಗಿದ್ದಾರೆ, ಅದಕ್ಕೆ ನಾನು ರಾಜೀನಾಮೆ ವಾಪಸ್ ಪಡೆದೆ : ಶಿಲ್ಪಾನಾಗ್

ABOUT THE AUTHOR

...view details