ಮೈಸೂರು:ಬೊಲೆರೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು 6 ಮಂದಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹುಣಸೂರು ತಾಲೂಕಿನ ಕಲ್ಬೆಟ್ಟ ರಸ್ತೆಯಲ್ಲಿ ನಡೆದಿದೆ. ಮೂವರು ಗಾಯಗೊಂಡಿದ್ದು ಅವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಡಿಕೇರಿಯ ಪಾಲಿಬೆಟ್ಟ ನಿವಾಸಿಗಳಾದ ಚಾಲಕ ಸಂತೋಷ್(42), ಅನಿಲ್ (44), ಬಾಬು (48), ರಾಜೇಶ್ (40), ದಯಾನಂದ್ (42), ವಿನೀತ್ (37) ಸ್ಥಳದಲ್ಲೇ ಮೃತಪಟ್ಟವರು. ಸ್ನೇಹಿತ ಸದಾನಂದ ಎಂಬವರ ಮದುವೆ ಮುಗಿಸಿಕೊಂಡು ಹುಣಸೂರಿನಿಂದ ಪಾಲಿಬೆಟ್ಟಕ್ಕೆ ಬರುತ್ತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದಿದೆ.