ಕರ್ನಾಟಕ

karnataka

ETV Bharat / state

ಮೈಸೂರು: ಕೆಎಸ್​ಆರ್​ಟಿಸಿ ಬಸ್-ಜೀಪ್ ಅಪಘಾತ: ಮೂವರು ಸಾವು - ಭೀಕರ ರಸ್ತೆ ಅಪಘಾತ

ಹುಣಸೂರು ನಗರದ ಆರ್​ಟಿಒ ಕಚೇರಿಯ ಬಳಿ ಕೆಎಸ್​​ಆರ್​ಟಿಸಿ ಎಲೆಕ್ಟ್ರಿಕ್ ಬಸ್ ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿದ್ದು ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

road accident
road accident

By ETV Bharat Karnataka Team

Published : Jan 2, 2024, 11:10 AM IST

Updated : Jan 2, 2024, 2:01 PM IST

ಮೈಸೂರು: ಕೆಎಸ್​​ಆರ್​ಟಿಸಿ ಎಲೆಕ್ಟ್ರಿಕ್ ಬಸ್ ಹಾಗೂ ಜೀಪ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ಮೂವರು ಅಸುನೀಗಿರುವ ಘಟನೆ ಹುಣಸೂರು ನಗರದ ಆರ್​ಟಿಒ ಕಚೇರಿಯ ಬಳಿ ಇಂದು ಬೆಳಿಗ್ಗೆ ನಡೆದಿದೆ.

ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹಾಗೂ ಹುಣಸೂರಿನಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಜೀಪ್ ಅಪಘಾತಕ್ಕೀಡಾಗಿದೆ. ಜೀಪ್​​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿದೆ. ಓರ್ವ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವಿಗೀಡಾದ ಮಾಹಿತಿ ಇದ್ದು, ಖಚಿತವಾಗಿಲ್ಲ.

ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಠಾಣೆಯ ಪೋಲಿಸರು ಭೇಟಿ ನೀಡಿದ್ದು, ಮೃತರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ:ರಸ್ತೆ ಅಪಘಾತ: ಬೆಂಗಳೂರಿನಲ್ಲಿ ಕಳೆದ ವರ್ಷ 909 ಸಾವು, ₹184 ಕೋಟಿ ದಂಡ ವಸೂಲಿ

ಬೆಂಗಳೂರಿನ ಅಪಘಾತದ ಅಂಕಿ-ಅಂಶ:2023ರಲ್ಲಿಸಂಭವಿಸಿದ ಅಪಘಾತ ಪ್ರಕರಣಗಳ ಅಂಕಿಅಂಶವನ್ನು ನಗರ ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ನಿಯಮ ಉಲ್ಲಂಘನೆ ನಿಯಂತ್ರಿಸಲು ಪೊಲೀಸರು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡರೂ 880 ಮಾರಣಾಂತಿಕ ಅಪಘಾತ ಪ್ರಕರಣಗಳು ನಡೆದಿದ್ದು, ಈ ಪೈಕಿ 909 ಮಂದಿ ಸಾವನ್ನಪ್ಪಿದ್ದಾರೆ.

ಮಾರಣ ದಾಖಲಾಗದ 4,095 ಅಪಘಾತ ನಡೆದಿದ್ದು 4,201 ಮಂದಿ ಗಾಯಗೊಂಡಿದ್ದಾರೆ. ಸಂರ್ಪಕ ರಹಿತವಾಗಿ 87,25,321 ಲಕ್ಷ ಪ್ರಕರಣ ದಾಖಲಿಸಿದರೆ, ಸಂಪರ್ಕಸಹಿತ ನಿಯಮದಡಿ 2,49,624 ಪ್ರಕರಣಗಳು ದಾಖಲಾಗಿವೆ. ಒಟ್ಟು 184.83 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ವಿರುದ್ಧ 7,055 ಡ್ರಿಂಕ್ ಡ್ರೈವ್ ಪ್ರಕರಣ ದಾಖಲಿಸಲಾಗಿದೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಅಪಘಾತ ಎಸಗಿದವರ ವಿರುದ್ಧ 16 ಪ್ರಕರಣಗಳು ದಾಖಲಾಗಿವೆ. ತುರ್ತು ಸಂದರ್ಭದಲ್ಲಿ ರೋಗಿಗಳ ಸ್ಥಳಾಂತರಕ್ಕೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿದ್ದು, 22 ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.

"ವೇಗವಾಗಿ ವಾಹನ ಚಲಾಯಿಸುವ ಭರದಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ಕಳೆದುಕೊಂಡು ಎದುರು ಬರುವ ವಾಹನಗಳಿಗೆ ಅಥವಾ ಪಾದಚಾರಿಗಳ ಮೇಲೆ ಅಪಘಾತ ಮಾಡುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ. ಹೆಲ್ಮೆಟ್ ರಹಿತ,‌ ಮದ್ಯಸೇವನೆ ಹಾಗೂ ನಿರ್ಲಕ್ಷ್ಯದಿಂದ ಚಾಲಕರು ಅಪಘಾತವೆಸಗುತ್ತಿದ್ದಾರೆ. ವಾಹನ ಸವಾರರು ಪೊಲೀಸರು ತಮ್ಮನ್ನ‌ ಪ್ರಶ್ನಿಸುತ್ತಿಲ್ಲ‌ ಎಂಬ ಮನೋಭಾವ ಹಾಗೂ ಸಂಚಾರ ನಿಯಮ ಪಾಲನೆ ಬಗ್ಗೆ ಅಗೌರವ ಹೆಚ್ಚಾಗಿದೆ" ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ:ಉತ್ತರ ಕನ್ನಡ: ಸಂಚರಿಸುತ್ತಿದ್ದಾಗ ಬಸ್​ನ ಚೆಸ್ಸಿ ಕಟ್​​, ಪ್ರಯಾಣಿಕರಿಗೆ ಗಾಯ

Last Updated : Jan 2, 2024, 2:01 PM IST

ABOUT THE AUTHOR

...view details